Advertisement

ಕಂಬದಕೋಣೆ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

12:32 AM Jun 10, 2022 | Team Udayavani |

ಉಪ್ಪುಂದ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಂಬದಕೋಣೆ ಪಡುವಾಯನ ಮನೆ ಮಂಜುನಾಥ ದೇವಾಡಿಗ (38) ಅವರು ಜೂ. 9ರಂದು ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ರಾ.ಹೆ. 66ರ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮಂಜುನಾಥ ದೇವಾಡಿಗರು ಜೂ. 6ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ರಾತ್ರಿ ಮನೆಗೆ ಬಾರದೆ ಇದ್ದಾಗ ಅವರಿಗೆ ಫೋನ್‌ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ಬಗ್ಗೆ ಜೂ. 8ರಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಗುರುತು ಪತ್ತೆ :

ಜೂ. 9ರಂದು ನಾಯ್ಕನಕಟ್ಟೆಯ ರಾ.ಹೆ. 66ರ ಸಮೀಪ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮನೆಮಂದಿ ಗುರುತು ಪತ್ತೆ ಮಾಡಿದ್ದಾರೆ. ವಾದ್ಯ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಮೂರು ದಿನಗಳ ಹಿಂದೆ ಮಂಜುನಾಥ ಅವರು ಕಾಣೆಯಾದಾಗ ಅವರ ಪತ್ನಿ ಮನೆಯವರು ದೈವದ ಬಳಿ ಕಾಣೆಯಾದ ಬಗ್ಗೆ ಕೇಳಿದಾಗ “ಅವನು ನನ್ನ ಸರಹದ್ದಿನಲ್ಲಿಯೇ ಇದ್ದು, ಇನ್ನೆರಡು ದಿನದಲ್ಲಿ ಸಿಗುವಂತೆ ಮಾಡುವುದಾಗಿ ನುಡಿದಿತ್ತು. ದೈವದ ನುಡಿ ನಿಜವಾಯಿತು ಎಂದು ಜನರಾಡಿಕೊಳ್ಳುತ್ತಿದ್ದಾರೆ.

Advertisement

ಪೊಲೀಸರಿಂದ ಸ್ಥಳ ಪರಿಶೀಲನೆ :

ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ ಕುಮಾರ ನಾಯ್ಕ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜನ ಆಗಾಗ್ಗೆ ಓಡಾಡುವ ಪ್ರದೇಶ :

ಸ್ಥಳೀಯ ನಿವಾಸಿಗಳ ಪ್ರಕಾರ ಈ ದಾರಿಯಲ್ಲಿ ಕಳೆದೆರಡು ದಿನಗಳಲ್ಲಿ ಯಾವುದೇ ವ್ಯಕ್ತಿಯ ಕುರುಹು ಇಲ್ಲಿ ಇದ್ದಿರಲಿಲ್ಲ. ಶವ ದೊರೆತ ಸನಿಹದಲ್ಲೆ ಸಾರ್ವಜನಿಕರು ನಡೆಯುವ ದಾರಿ ಇದೆ. ಮನೆ ಹಾಗೂ ತೋಟ ಇದೆ. ಈ ಪರಿಸರದಲ್ಲಿ ಜಾನುವಾರುಗಳನ್ನು ಕಟ್ಟಲಾಗುತ್ತದೆ. ಇಲ್ಲಿ ಆಗಾಗ್ಗೆ ಸಾರ್ವಜನಿಕರು ತಿರುಗಾಡುತ್ತಿರುತ್ತಾರೆ. ಮೊದಲೇ ವ್ಯಕ್ತಿ ಬಿದ್ದಿದ್ದರೆ ತಿಳಿಯುತ್ತಿತ್ತು ಎನ್ನುವುದು ಸ್ಥಳೀಯರ ವಾದ. ಹಿಂದಿನ ದಿನ ರಾತ್ರಿ ಇಲ್ಲಿ ಯಾರೋ ಅವರನ್ನು ತಂದು ಹಾಕಿರುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮನೆಯವರು ಕೂಡ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next