Advertisement

ಜೀವಕ್ಕೆ ಕುತ್ತು ತಂದ ಅನೈತಿಕ ಸಂಬಂಧ : ಕೊರಟಗೆರೆಯಲ್ಲಿ ವಿವಾಹಿತ ಪ್ರೇಮಿಗಳಿಬ್ಬರ ಆತ್ಮಹತ್ಯೆ

07:53 PM Dec 02, 2021 | Team Udayavani |

ಕೊರಟಗೆರೆ : ವಿವಾಹಿತ ಪ್ರೇಮಿಗಳಿಬ್ಬರು ತಮ್ಮ ಅನೈತಿಕ ಸಂಬಂಧ ಕುಟುಂಬಗಳಿಗೆ ತಿಳಿದು ಪ್ರಶ್ನೆ ಮಾಡಿದ ಕಾರಣ ಪ್ರೇಯಸಿ ವಿಷ ಸೇವಿಸಿದರೆ ಪ್ರೇಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಕೊರಟಗೆರೆ ತಾಲೂಕಿನ ಬಿಡಿಪುರ ಬಳಿಯ ಗಿರಚಿಕ್ಕನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಜರಗಿದ್ದು, ಇದೇ ಗ್ರಾಮದ ತಿಮ್ಮಯ್ಯನ ಮಾಡಿದಿ ವೆಂಕಟಲಕ್ಷ್ಮಮ್ಮ (25 ವರ್ಷ) ಹಾಗೂ ಆನಂದ್ ಕುಮಾರ್ (27 ವರ್ಷ) ಎಂಬ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.

ಮೃತೆ ವೆಂಕಟಲಕ್ಷ್ಮಮ್ಮ ಎರಡು ಮಕ್ಕಳ ತಾಯಿಯಾಗಿದ್ದು, ಗಂಡ ಟ್ಯಾಕ್ಸಿ ಚಾಲಕನಾಗಿದ್ದು ಆತನ ಜೊತೆ ಆನಂದ್ ಕುಮಾರ್ ಹೆಲ್ಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಒಂದು ದಿನ ವೆಂಕಟಲಕ್ಷ್ಮಮ್ಮಳ ಗಂಡ ಕೆಲಸಕ್ಕೆ ಹೊರಗೆ ಹೋದ ಸಂದರ್ಭದಲ್ಲಿ  ಆನಂದ್ ಕುಮಾರ್ ಸಲಿಗೆಯಿಂದ ವರ್ತಿಸಿ ಪುಸಲಾಯಿಸಿದ್ದ ಎನ್ನಲಾಗಿದ್ದು, ಇವರ ಸಲಿಗೆ ಅನೈತಿಕ ಸಂಬಂಧಕ್ಕೆ ತಿರುಗಿ ಊರಿನ ಜನರಿಗೆ ತಿಳಿಯಿತು ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ವಿಜಯಪುರದ ಯೋಧ ಅಸ್ಸಾಂನಲ್ಲಿ ಹೃದಯಾಘಾತದಿಂದ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಇಬ್ಬರು ಹೊಸ ಪಾಳ್ಯದ ಖಾಸಗಿ ಜಮೀನದಲ್ಲಿ ಸ್ವಲ್ಪ ಹೊತ್ತು ಮಾತನಾಡಿ, ನಂತರ ವೆಂಕಟಲಕ್ಷ್ಮಮ್ಮ ಗಾಬರಿಯಿಂದ ವಿಷ ಸೇವಿಸಿದ ಪರಿಣಾಮ ಆನಂದ್ ಕುಮಾರ್  ದಿಕ್ಕುತೋಚದೆ ಸ್ವಲ್ಪ ದೂರದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾನೆ ಎನ್ನಲಾಗಿದೆ.

Advertisement

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next