Advertisement

ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು

10:40 PM Apr 17, 2021 | Team Udayavani |

ಬೆಂಗಳೂರು: ಐದು ವರ್ಷಗಳ ಹಿಂದೆ ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಆರ್‌.ಕೆ.ಹೆಗ್ಗಡೆ ನಗರದ ನಿವಾಸಿ ಮೊಹಮ್ಮದ್‌ ಹುಸೇನ್‌ (32) ಬಂಧಿಸಿ ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಅಚ್ಯುತ್‌ ಕುಮಾರ್‌ ಗಣಿ (33), ಅಕ್ಮಲ್‌ ಬೇಗ್‌ (32), ಅಮ್ಜದ್‌ (30) ಕೂಡ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 660 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

2017 ಸೆ.29ರಂದು ಸಂಜೆ ಬ್ಯಾಟರಾಯನಪುರ ಮುನೇಶ್ವರ ಬ್ಲಾಕ್‌ ನಿವಾಸಿ ಉದ್ಯಮಿ ಆನಂದ್‌ ಎಂಬವರು ವಿಜಯದಶಮಿ ಹಬ್ಬದ ಅಂಗವಾಗಿ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ರಾಜರಾಜೇಶ್ವರಿ ನಗರದಲ್ಲಿರುವ ಸಹೋದರಿ ಕವಿತಾ ಮನೆಗೆ ಹೋಗಿದ್ದರು. ಅದನ್ನು ಗಮನಿಸಿದ್ದ ಆರೋಪಿಗಳು ಅವರ ಮನೆಯ ಬಾಲ್ಕನಿಗೆ ಬಂದು ಅಲ್ಲಿದ್ದ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಒಂದನೇ ಅಂತಸ್ತಿನ ಕೋಣೆಯಲ್ಲಿದ್ದ ಕಬೋರ್ಡ್‌ನ್ನು ಕಬ್ಬಿಣದ ರಾಡ್‌ನಿಂದ ಒಡೆದು ಒಳಗಿದ್ದ ಲಾಕರ್‌ ಕೀ ತೆಗೆದುಕೊಂಡು ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಸೇರಿ 25 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಹೊತ್ತೂಯ್ದಿದ್ದರು.

ಇದನ್ನೂ ಓದಿ :ಭಾರತದ ಔಷಧ ರಫ್ತಿನಲ್ಲಿ ಶೇ.18ರಷ್ಟು ಪ್ರಗತಿ : 24.44 ಶತ ಕೋಟಿ ಡಾಲರ್‌ ಮೌಲ್ಯದ ಔಷಧ ರಫ್ತು

ಆನಂದ್‌ ಸಹೋದರಿ ಮನೆಯು ನಿರ್ಮಾಣ ಹಂತದಲ್ಲಿದ್ದ ಹಿನ್ನೆಲೆಯಲ್ಲಿ ಅವರ ಒಡವೆಗಳನ್ನೂ ಇಲ್ಲೇ ಇಡಲಾಗಿತ್ತು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ವೃತ್ತಿಪರ ಕಳ್ಳ ಮಹಮ್ಮದ್‌ ಹುಸೇನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳೆದ 5 ವರ್ಷಗಳ ಹಿಂದೆ ಆನಂದ್‌ ಮನೆಯಲ್ಲಿ ನಡೆಸಿದ ಕಳ್ಳತನ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಜತೆಗೆ ಈಗಾಗಲೇ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಇತರ ಆರೋಪಿಗಳ ಬಗ್ಗೆಯೂ ಮಾಹಿತಿ ನೀಡಿದ್ದ. ಈ ಆಧಾರದ ಮೇಲೆ ನಾಲ್ವರನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಎಲ್ಲ ಆರೋಪಿಗಳು ಕಳ್ಳತನವನ್ನೇ ವೃತ್ತಿಯನ್ನಾಗಿಸಿದ್ದು, ಆರೋಪಿ ಅಚ್ಯುತ್‌ ಕುಮಾರ್‌ ಗಣಿ ವಿರುದ್ಧ ಸರಗಳ್ಳತನ, ಮನೆಗಳ್ಳತನ ಸೇರಿ ಒಟ್ಟು 180 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next