ಮುಂಬೈ: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ನೋವಿನ ಕೂಗು ತನ್ನ ಆತ್ಮಹತ್ಯೆ ವಿಫಲವಾಗುವಂತೆ ಮಾಡಿದ ಘಟನೆ ಮುಂಬೈನ ಉಲ್ವೆ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದೆ.
ಘಟನೆಯ ದಿನ, ಮಹಿಳೆ ವಾಸವಾಗಿದ್ದ ನೆರೆಹೊರೆಯವರು ಮುಂಬೈನ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಫ್ಲ್ಯಾಟ್ ಒಳಗಿನಿಂದ ಮಗು ಅಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೋಲೀಸರು, ಬಾಗಿಲು ತೆರೆದು ಒಳ ಹೊಕ್ಕಾಗ 3 ವರ್ಷದ ಬಾಲಕಿ ಅಳುತ್ತಿರುವುದು ಗೊತ್ತಾಗಿದೆ. ಇನ್ನೊಂದು ಕೋಣೆ ಬಡಿದರೂ ಸ್ಪಂದಿಸದ ಕಾರಣ, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬಾಗಿಲು ತೆರೆದಾಗ ಮಹಿಳೆ ಸೀಲಿಂಗ್ ಫ್ಯಾನ್ ನಿಂದ ನೇತಾಡುತ್ತಿರುವುದು ಗೊತ್ತಾಗಿದೆ. ಅಷ್ಟರಲ್ಲಿ ಕಾನ್ ಸ್ಟೇಬಲ್ ಒಬ್ಬರು ಮಹಿಳೆ ಉಸಿರಾಡುತ್ತಿರುವುದನ್ನ ಗಮನಿಸಿದ್ದಾರೆ. ತಕ್ಷಣವೇ ಆಕೆಯನ್ನ ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ಆ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.