Advertisement
ಟೆಸ್ಟ್ ಎಂದರೆ ಕುಟುಕಿ ಆಡುವ ಆಟ ನೋಡಲು ತುಂಬಾ ಬೋರ್ ಎಂದು ಕೊಂಡು ಕತ್ತಲೆಯಲ್ಲಿ ಇದ್ದಂತ ಮಂದಿಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ಮಹತ್ತರ ಸ್ಕೋರ್ ಅನ್ನು ಚೇಸ್ ಮಾಡಿ ಬೆಳಕು ಚೆಲ್ಲಿದ ವ್ಯಕ್ತಿ ಎಂದರೆ ಅದು ರಿಷಬ್ ಪಂತ್.
Related Articles
Advertisement
ಒಂದೆಡೆ ವಿಕೆಟ್ ಪತನ ಗೊಳ್ಳುತ್ತಿದೆ, ಟಾರ್ಗೆಟ್ ನ ಒತ್ತಡ ಏರುತ್ತಿದೆ ಇಂತಹ ಕಷ್ಟದ ಸಮಯದಲ್ಲಿ ಸಂಜೆಯಲ್ಲಿ ಅರಳಿದ ಬ್ರಹ್ಮ ಕಮಲ ಹೂವಿನಂತೆ ಹೊರಬಿದ್ದ ಪ್ರತಿಭೆಯೇ ರಿಷನ್ ಪಂತ್.
ಒಂದೆಡೆ ವಿಕೆಟ್ ಉರುಳುತ್ತ ಇದ್ದರು ತನ್ನ ಆಟ ತಾನು ಆಡುವುದು ಎಂದು ಆಡುತ್ತ ನೋಡುಗರಿಗೆ ಇದು ಟೆಷ್ಟೋ? ಅಥವಾ ಟಿ – ಟ್ವೆಂಟಿಯೋ ಎಂದು ತಿಳಿಯಲು ಗೊಂದಲದಲ್ಲಿ ಸಿಕ್ಕಿಸಿದ ಚಮತ್ಕಾರಿ ಪಂತ್.
ಒಟ್ಟು 138 ಬಾಲ್ ನಲ್ಲಿ 89 ರನ್ ಗಳಿಸಿ ಪಂದ್ಯಾವನ್ನು ಸೋಲಿನ ಸೋಪಾನದಿಂದ ಗೆಲುವಿನ ಹೂ ದಾಣಕ್ಕೆ ಎಳೆದು ಕೊಂಡು ಹೋದರು. ಇವರೊಂದಿಗೆ ಅರ್ಧಷ್ಟು ಕೈ ಜೋಡಿಸಿದ ಆಟಗಾರ ಪೂಜಾರ 211 ಬಾಲ್‌ಗೆ 56 ರನ್ ಗಳಿಸಿ ಸಾಥ್ ಕೊಟ್ಟರು ಕೊನೆಯ ತನಕ ಬೌಲರ್ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಗೆಲುವಿನ ಅಸೆಯನ್ನೇ ಬಿಟ್ಟಂತಹ ತಂಡಕ್ಕೆ ಗೆಲುವಿನ ರುಚಿ ತೋರಿಸಿಕೊಟ್ಟು ಶತಕ ವಂಚಿತರದರೂ ಸಹ ತಂಡದ ಗೆಲ್ಲುವಿಗೆ ರೂವಾರಿಯಾದರು.
ಆಸ್ಟ್ರೇಲಿಯಾ ನೆಲದಲ್ಲಿ ಅವರ ಜನರ ಮಧ್ಯ ದೊಡ್ಡ ಮೊತ್ತವನ್ನು ಅಷ್ಟು ಜನರ ಮಧ್ಯೆ ಹೊಡೆದು ಬೀಗುವುದು ಅಂದರೆ ಅಷ್ಟೇ ಸುಲಭವಲ್ಲ. ಅಲ್ಲಿಂದ ಶುಭಾರಂಭ ಗೊಂಡ ಪಂಥರ್ಭಟ ಮತ್ತೂಮ್ಮೆ ಆಸ್ಟ್ರೇಲಿಯಾ ವಿರುದ್ಧವೇ 159 ರನ್ಸ್ ಭಾರಿಸಿದರು. ಆಸ್ಟ್ರೇಲಿಯಾವನ್ನು ಅವರ ಬ್ರಿಸಬನೇ ಪಿಚ್ ನಲ್ಲಿಯೇ ಹೊಡೆದು ಗಬ್ಬ ಹೀರೋ ಎಂಬ ಹೆಸರನ್ನು ಪಟ್ಟಲಂಕಾರ ಮಾಡಿದರು.
ರಕ್ಷಿತ್ ಆರ್.ಪಿ
ಹೆಬ್ರಿ