Advertisement

ಸಹಾಯ ಮಾಡುವ ಸ್ವಭಾವದವಳು: ಪತ್ನಿ ಪರ ಜಡೇಜಾ ಭರ್ಜರಿ ಪ್ರಚಾರ

03:13 PM Nov 14, 2022 | Team Udayavani |

ಜಾಮ್‌ನಗರ : ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಸೋಮವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಗುಜರಾತ್ ಚುನಾವಣೆಯಲ್ಲಿ ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸುವ ಮುನ್ನ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ರವೀಂದ್ರ ಜಡೇಜಾ ”ಇದು ಇವಳು ಮೊದಲ ಬಾರಿಗೆ ಎದುರಿಸುತ್ತಿರುವ ಚುನಾವಣೆ. ಅವಳು ಬಹಳಷ್ಟು ಕಲಿಯುವುದಿದೆ, ಇದರಲ್ಲಿ ಪ್ರಗತಿ ಹೊಂದುತ್ತಾಳೆ ಎಂದು ನಾನು ಭಾವಿಸುತ್ತೇನೆ” ಎಂದರು.

”ರಿವಾಬಾ ಸಹಾಯ ಮಾಡುವ ಸ್ವಭಾವದವಳು ಮತ್ತು ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸುತ್ತಾಳೆ.  ಆದ್ದರಿಂದ ರಾಜಕೀಯಕ್ಕೆ ಬಂದಳು. ಜನರಿಗಾಗಿ ಕೆಲಸ ಮಾಡಲು ಅವಳು ಪ್ರಧಾನಿ ಮೋದಿಯವರ ಮಾರ್ಗವನ್ನು ಅನುಸರಿಸಲು ಬಯಸುತ್ತಾಳೆ” ಎಂದು ಪ್ರಚಾರದ ಸಂದರ್ಭ ಜಡೇಜಾ ಹೇಳಿದ್ದಾರೆ.

ಗುಜರಾತ್ ನಲ್ಲಿ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್, ಆಪ್ ಸೇರಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next