ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಯಾಗುವ ನಿರೀಕ್ಷೆಯನ್ನು ಇನ್ನೂ ಇಟ್ಟುಕೊಂಡಿದೆ. ಈ ಕಾರಣಕ್ಕಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ವೇಳಾಪಟ್ಟಿಯನ್ನು ಗೇಮ್ಸ್‌ನ ಸಂಘಟನ ಸಮಿತಿಗೆ ಶಿಫಾರಸು ಮಾಡಿದೆ.
ಕ್ರಿಕೆಟ್ ಸೇರ್ಪಡೆಯ ಕುರಿತು ಮುಂದಿನ ಅಕ್ಟೋಬರ್ ಹೊತ್ತಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧಾರ ತೆಗೆದು ಕೊಳ್ಳಲಿದೆ. ಅದಕ್ಕಿಂತ ಮೊದಲು ಸಂಘಟನ ಸಮಿ ತಿಯು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿ ಮಗೊಳಿಸಲಿದೆ.
ಈ ಪಟ್ಟಿಯನ್ನು ಅಕ್ಟೋಬರ್‌ನಲ್ಲಿ ನಡೆಯರುವ ಐಒಸಿಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಕ್ರಿಕೆಟ್ ಅಲ್ಲದೇ ಬೇಸ್‌ಬಾಲ್/ಸಾಫ್ಟ್ಬಾಲ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್, ಮೋಟಾರ್‌ನ್ಪೋರ್ಟ್ಸ್ 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.