Advertisement

ಫೈನಲ್‌ನಲ್ಲಿ ನೀರಜ್‌ ಚೋಪ್ರಾ ಚಿನ್ನದ ಪದಕಕ್ಕೆ ತಣ್ಣೀರೆರಚಿದ ಆ್ಯಂಡರ್ಸನ್‌

09:55 AM Jul 25, 2022 | Team Udayavani |

ಯೂಜೀನ್‌: ಫೈನಲ್‌ನಲ್ಲಿ ನೀರಜ್‌ ಚೋಪ್ರಾ ಅವರ  ಚಿನ್ನದ ಪದಕಕ್ಕೆ ತಣ್ಣೀರೆರಚಿದ ಆ್ಯಂಡರ್ಸನ್‌ ಪೀಟರ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ.

Advertisement

ಇವರು ಕೆರಿಬಿಯನ್‌ ದ್ವೀಪದ ಗ್ರೆನಡಾ ದವರು. ಮೂಲತಃ ಕ್ರಿಕೆಟರ್‌. ಆದರೆ ಕ್ರಿಕೆಟ್‌ನಲ್ಲಿ ಮುಂದುವರಿಯಲಾಗಲಿಲ್ಲ. ಉಸೇನ್‌ ಬೋಲ್ಟ್ ಅವರ ವಿಶ್ವದಾಖಲೆ ಯಿಂದ ಪ್ರಭಾವಿತರಾಗಿ ಓಟಗಾರನಾದರು. ಇಲ್ಲಿ ಮುಂದುವರಿಯಲು ಗಾಯದ ಸಮಸ್ಯೆ ಕಾಡಿತು. ಕೊನೆಗೆ ಕೈಗೆತ್ತಿಕೊಂಡದ್ದೇ ಜಾವೆಲಿನ್‌.

ನೀರಜ್‌ ಚೋಪ್ರಾ-ಪೀಟರ್ಸನ್‌ ಮೊದಲ ಸಲ ಎದುರಾದದ್ದು 2016ರ ಅಂಡರ್‌-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ. ಇಲ್ಲಿ ನೀರಜ್‌ 86.48 ಮೀ. ದೂರದ ಸಾಧನೆಯೊಂದಿಗೆ ಚಾಂಪಿಯನ್‌ ಆದರು. ಅಂದು ಆ್ಯಂಡರ್ಸನ್‌ಗೆ ತೃತೀಯ ಸ್ಥಾನ ಲಭಿಸಿತ್ತು.

“ನಾನು ಕ್ರಿಕೆಟ್‌ ಮತ್ತು ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಎರಡನ್ನೂ ಪ್ರೀತಿಸುತ್ತೇನೆ. ಈಗಲೂ 90 ಮೈಲು ವೇಗದಲ್ಲಿ ಚೆಂಡನ್ನೆಸೆಯುವ ಸಾಮರ್ಥ್ಯ ನನ್ನಲ್ಲಿದೆ. ಗಾಯದ ಸಮಸ್ಯೆಯಿಂದಾಗಿ ಜಾವೆಲಿನ್‌ ನೆಚ್ಚಿಕೊಳ್ಳಬೇಕಾಯಿತು. ಪೀಟರ್

Advertisement

Udayavani is now on Telegram. Click here to join our channel and stay updated with the latest news.

Next