Advertisement
ಬ್ರಿಸ್ಬೇನ್ ಸಭೆಯಲ್ಲಿ ಭಾಗವಹಿಸಿರುವ ವಿಡಿಯೋವನ್ನು ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 1900ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೊನೆಯ ಸಲ ಕ್ರಿಕೆಟ್ ಆಡಿಸಲಾಗಿತ್ತು. ಅದಾಗಿ 128 ವರ್ಷಗಳ ಬಳಿಕ ಅಂದರೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ನಡೆಯುವುದರಲ್ಲಿದೆ. ಆದರೆ 2032ರ ಬ್ರಿಸ್ಬೇನ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ನಡೆಯುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ. ಇದೇ ಕಾರಣಕ್ಕೆ ಬ್ರಿಸ್ಬೇನ್ಗೆ ಭೇಟಿ ನೀಡಿರುವ ಜಯ್ ಶಾ, ಸಭೆಯಲ್ಲಿ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.