Advertisement

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

06:49 PM May 09, 2024 | Team Udayavani |

ಉಡುಪಿ: ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕುಂದಾಪುರದ ಗಾಂಧಿ ಮೈದಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುದರ್ಶನ್‌ ಮತ್ತು ಕರ್ತವ್ಯ ಅವರು ಜತೆಯಾಗಿ ಸೇರಿಕೊಂಡು ಬೆಟ್ಟಿಂಗ್‌ ಮೊಬೈಲ್‌ ಅಪ್ಲಿಕೇಶನ್‌ ಆ್ಯಪ್‌ ಸಹಾಯದಿಂದ ಸ್ಮಾರ್ಟ್‌ಫೋನ್‌ ಮೂಲಕ ಬುಧವಾರ ನಡೆದ ಹೈದರಾಬಾದ್‌ ಮತ್ತು ಲಕ್ನೋ ತಂಡಗಳ ನಡುವಣ ಪಂದ್ಯಕ್ಕೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯ ನಿರೀಕ್ಷಕರಾದ ರಾಮಚಂದ್ರ ನಾಯಕ್‌ ಅವರಿಗೆ ದೂರು ಬಂದಿತ್ತು.

ಬೆಟ್ಟಿಂಗ್‌ನಲ್ಲಿ ಸಂಗ್ರಹಿಸಿದ ಹಣವನ್ನು ಪಡೆದುಕೊಂಡು ಹೋಗಲು ಸ್ಥಳಕ್ಕೆ ಹೆಬ್ರಿ ನಿವಾಸಿ ತೇಜಸ್‌ ಬರುವ ಬಗ್ಗೆ ಮಾಹಿತಿ ಲಭಿಸಿತ್ತು. ತೇಜಸ್‌ ಎಂಬಾತ ಸುದರ್ಶನ್‌, ಕರ್ತವ್ಯ ಮತ್ತು ಇನ್ನೂ ಕೆಲವರಿಗೆ ಈ ಅಕ್ರಮ ಬೆಟ್ಟಿಂಗ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿಕೊಡುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next