Advertisement

ಜಾಹೀರಾತಿನಲ್ಲಿ ಸೃಜನಶೀಲತೆಯೇ ಜೀವಾಳ

12:41 AM May 01, 2019 | sudhir |

ಇಂದು ಕಾರ್ಪೊರೇಟ್‌ ಜಗತ್ತು ಬೆಳೆದು ನಿಂತಿದ್ದು, ಇದಕ್ಕೆ ಪೂರಕವಾಗಿ ಜಾಹೀರಾತು ಕ್ಷೇತ್ರವೂ ವಿಸ್ತರಿಸಿಕೊಂಡಿದೆ. ಜಾಹೀರಾತು ಕ್ಷೇತ್ರದಲ್ಲಿ ಇಂದು ಹಲವು ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ನಾವು ಗಮನಿಸಬಹುದಾಗಿದೆ.
ಕಾರ್ಪೊರೇಟ್‌ ಕಂಪೆನಿಯ ತಾನು ತಯಾರಿಸಿದ ಸರಕನ್ನು ಜನ ಸಾಮಾನ್ಯರಿಗೆ ಮಾಹಿತಿ ಮುಟ್ಟಿಸುವ ಮಾರ್ಗವೆಂದರೆ ಅದು ಜಾಹೀರಾತು. ವಸ್ತು, ಸೇವೆಗಳ ಬಗ್ಗೆ ಸಾಮಾಜಿಕ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಜಾಹೀರಾತನ್ನು ಬಳಸಲಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉತ್ತಮ ಸಂವಹನ ಕೌಶಲ, ಬುದ್ಧಿವಂತಿಕೆ, ಸೃಜನಾಶೀಲರಾದವರಿಗೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚಿನದವಾಗಿರುತ್ತವೆ.

Advertisement

ಜಾಹೀರಾತು ಕ್ಷೇತ್ರವನ್ನು ಗ್ರಾಹಕ ಸೇವೆ, ಕ್ರಿಯಾಶೀಲತೆ ಹಾಗೂ ಯೋಜನೆ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಗ್ರಾಹಕ ಸೇವೆಯಲ್ಲಿ ಗ್ರಾಹಕರ ಅಭಿರುಚಿ ಹಾಗೂ ಇಷ್ಟಗಳ ಬಗ್ಗೆ ಗಮನಹರಿಸಿದರೆ, ಜಾಹೀರಾತಿನ ಸ್ಕ್ರಿಪ್ಟ್, ಬರೆವಣಿಗೆ ಹಾಗೂ ವಿಷ್ಯುವಲ್‌ ಬಗ್ಗೆ ಕ್ರೀಯಾಶೀಲ ವಿಭಾಗದವರೂ ಗಮನಹರಿಸಬೇಕಾಗುತ್ತದೆ. ಅನಂತರ ಜಾಹೀರಾತು ಯಶಸ್ಸಿಗೆ ತಂತ್ರ ಹೂಡುವುದು ಸ್ಟ್ರಾಟಜಿ (ಯೋಜನೆ) ವಿಭಾಗದವರ ಗಣನೀಯ ಪ್ರಯತ್ನ ಮಾಡಬೇಕಾಗುತ್ತದೆ. ಹಾಗಾಗಿ ಜಾಹೀರಾತು ಕ್ಷೇತ್ರದಲ್ಲಿ ಕ್ರಿಯವಿಟಿಯೇ ಇಲ್ಲಿನ ಮುಖ್ಯವಾದ ಸರಕು ಎಂದರೆ ತಪ್ಪಾಗಲಿಕ್ಕಿಲ್ಲ.
ಜಾಹೀರಾತು ಕ್ಷೇತ್ರದ ಉದ್ಯೋಗಕ್ಕೆ ಆರಿಸಬೇಕಾದರೆ, ಮಾರ್ಕೇಟಿಂಗ್‌ ವಿಭಾಗದ ಕೋರ್ಸ್‌ಗಳಾದ ಬಿಬಿಎಂ, ಎಂಬಿಎ ಪದವಿ ಪಡೆದಿರಬೇಕಾಗುತ್ತದೆ. ಅಲ್ಲದೇ ಪತ್ರಿಕೋದ್ಯಮ ಸಹಿತ ಇನ್ನು ಹಲವಾರು ಕ್ಷೇತ್ರಗಳಲ್ಲಿ ಪದವಿ ಪಡೆದವರಿಗೆ ಅವಕಾಶಗಳನ್ನು ನೀಡಲಾಗುತ್ತದೆ.

ಅನೇಕ ಉದ್ಯೋಗ ಅವಕಾಶ
ಜಾಹೀರಾತು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಖಾಸಗಿ ಜಾಹೀರಾತು ಏಜೆನ್ಸಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಜಾಹೀರಾತು ವಿಭಾಗಗಳು, ದಿನಪತ್ರಿಕೆ, ಜರ್ನಲ್‌ಗ‌ಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನಗಳ ಕಮರ್ಷಿಯಲ್‌ ವಿಭಾಗಗಳು,
ಮಾರ್ಕೆಟ್‌ ರಿಸರ್ಚ್‌ ಸಂಸ್ಥೆಗಳು – ಈ ಎÇÉೆಡೆ ಉದ್ಯೋಗಾವಕಾಶಗಳು ಹೆಚ್ಚಿವೆ. ಜತೆಗೆ ಫ್ರೀಲಾನ್ಸ್‌ (ಸ್ವತಂತ್ರ) ಆಗಿಯೂ ಜಾಹೀರಾತು ಸೇವೆ ಸಲ್ಲಿಸಬಹುದು. ಅಡ್ವಟೈìಸಿಂಗ್‌ ಮ್ಯಾನೇಜರ್‌, ಸೇಲ್ಸ… ಮ್ಯಾನೇಜರ್‌, ಸಾರ್ವಜನಿಕ ಸಂಪರ್ಕಾಧಿಕಾರಿ, ಕ್ರಿಯೇಟಿವ್‌ ಡೈರೆಕ್ಟರ್‌, ಕಾಪಿ ರೈಟರ್‌ ಮತ್ತು ಮಾರ್ಕೆಟಿಂಗ್‌ ಕಮ್ಯುನಿಕೇಷನ್ಸ್‌ ಮ್ಯಾನೇಜರ್‌ಗ ಳಾಗಿ ಹು¨ªೆಗಳನ್ನು ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next