Advertisement

ಸಾಹಿತ್ಯದಲ್ಲಿ  ಸೃಜನಶೀಲತೆಗೆ ಪ್ರಾಮುಖ್ಯ ಅಗತ್ಯ

09:00 AM Aug 15, 2017 | Harsha Rao |

ಕುಂದಾಪುರ: ಸಾಹಿತಿ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಸಮಾಜದ ಮಾನವೀಯ ನೆಲೆಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ತನ್ನ ಮಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸಹ ಅರಿತು ನಡೆಯ
ಬೇಕು. ನಿರ್ದಿಷ್ಟವಾದ ನಿರ್ಧಾರಗಳಿಗೆ ಜೋತುಬೀಳದೆ ಸೃಜನಶೀಲತೆಗೆ ತನ್ನ ಬರವಣಿಗೆಯಲ್ಲಿ ಪ್ರಾಮುಖ್ಯ ನೀಡ
ಬೇಕು ಎಂದು ಸಾಹಿತಿ ಶಾಂತಿ ಕೆ. ಅಪ್ಪಣ್ಣ ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ನಡೆದ ಡಾ| ಎಚ್‌.ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಾಹಿತಿ ಸಮಾಜದ ಜವಾಬ್ದಾರಿಗಳನ್ನು ಅರಿತುಕೊಂಡು ಸಾಹಿತ್ಯ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸುವ ಹಾಗೂ ಪೋಷಿಸುವ ವೇದಿಕೆಗಳ ಅಗತ್ಯವಿದೆ. ಆಗ ಮಾತ್ರ ಸಾಹಿತ್ಯ ಬೆಳೆಯ ಬಲ್ಲದು. ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ಸಾಹಿತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಪ್ರಶಂಸಾರ್ಹ. ಈ ಪ್ರಶಸ್ತಿಯು ನನ್ನ ಬರವಣಿಗೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು.

ಸಾಹಿತ್ಯಾಭಿರುಚಿ ಅಗತ್ಯ
ಮಣಿಪಾಲದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯವನ್ನು ಓದುವಂತಹ ಪ್ರವೃತ್ತಿ ಬೆಳೆದುಬರಬೇಕು. ವಿದ್ಯಾಸಂಸ್ಥೆಗಳಲ್ಲಿರುವ ಉತ್ತಮವಾದ ಗ್ರಂಥಾಲಯವನ್ನು ಉಪಯೋಗಿಸಿಕೊಂಡು ಸಾಹಿತ್ಯಾಭಿ ರುಚಿ ಬೆಳೆಸಿಕೊಳ್ಳಬೇಕು ಎಂದರು.

ಡಾ| ಎಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಾಂತಿ ಕೆ. ಅಪ್ಪಣ್ಣ ಅವರ “ಮನಸು ಅಭಿಸಾರಿಕೆ’ ಕುರಿತು ಧಾರವಾಡದ ಸಾಹಿತಿ ಡಾ| ವಿನಯ ಒಕ್ಕುಂದ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯನ್ನು ಕೂಡಿಹಾಕುವ ಪ್ರಯತ್ನ ಕೃತಿಯಲ್ಲಿದೆ. ಕನ್ನಡ ಸಾಹಿತ್ಯದ ಪೂರ್ವ ಪರಂಪರೆಯ ಪ್ರಧಾನ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯಗಳ ಎಷ್ಟೋ ಕಥೆಗಳು ಈ ಕಥೆಗಳಲ್ಲಿ ಎಳೆಯಾಗಿ ಬಂದಿವೆ. ಸಣ್ಣ  ಕಥೆಗಳು ಬದುಕಿನ ಸಂಗತಿಗಳನ್ನು ಶೋಧಿ ಸಿ ಅದಕ್ಕೊಂದು ಚೆಂದದ ರೂಪ ಕೊಡುತ್ತವೆ. ಆತ್ಮಗಳ ಛಾಯಾಗ್ರಹಣವೇ ಇಲ್ಲಿ ನಡೆಯುತ್ತವೆ. ಇವರ ಪುಸ್ತಕವು ಪರಂಪರೆಯ ರಚನೆಗಳ ಸತ್ವವನ್ನು ದಾಖಲಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ. ಹೆಣ್ಣಿನ ಸವಾಲುಗಳನ್ನು ಚಿತ್ರೀಕರಿಸುತ್ತವೆ. ಹಳ್ಳಿ, ನಗರ ಮತ್ತು ಅತಿನಾಗರಿಕತೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಡಾ| ಎಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಜಾನಕಿ ಬ್ರಹ್ಮಾವರ, ಶಿವಾನಂದ ಕಾರಂತ ಮತ್ತು ಪ್ರೊ| ವಸಂತ ಬನ್ನಾಡಿ ಉಪಸ್ಥಿತರಿದ್ದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ| ಎಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕಿ ರೇಖಾ ಬನ್ನಾಡಿ ಪ್ರಸ್ತಾವನೆಗೈದರು. ಪ.ಪೂ. ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗೊಂಡ ವಂದಿಸಿದರು. ಉಪನ್ಯಾಸಕ ರಂಜಿತ್‌ ಕುಮಾರ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next