Advertisement

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

07:12 PM Oct 16, 2021 | Team Udayavani |

ಕೊರಟಗೆರೆ: ತಹಶಿಲ್ದಾರ್ ಕಛೇರಿಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಿ ಕೆಲಸ ಪಡೆದಿರುವ ಕೋಳಾಲ ಮೂಲದ ಮುಖ್ಯ ಶಿಕ್ಷಕರ ವಿರುದ್ದ ತುಮಕೂರು ಡಿಸಿಆರ್ ಇ ಘಟಕದ ಪೋಲಿಸ್ ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ನೀಡಿದ ದೂರಿನ  ಅನ್ವಯ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನೆಲಮಂಗಲ ತಾಲ್ಲೂಕು ಗೋವಿನಹಳ್ಳಿ ಸರಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕ ಅಗಿರುವ ಲೇಟ್ ನಾಗಣ್ಣನ ಮಗನಾದ ವೀರಮಲ್ಲಯ್ಯ(59) ಮೂಲತಃ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ರಂಗಾಪುರ ಗ್ರಾಮದ ವಾಸಿ. ಕೊರಟಗೆರೆ ಪಿಎಸ್ಐ ನಾಗರಾಜು ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ.

ಮುಖ್ಯ ಶಿಕ್ಷಕ  ವೀರಮಲ್ಲಯ್ಯ ಮೂಲತಃ ಪ್ರವರ್ಗ-2(A) ರಲ್ಲಿ ಬರುವ  ಕುರುಬ ಸಮುದಾಯಕ್ಕೆ ಸೇರಿದ್ದಾನೆ.ಕೊರಟಗೆರೆ ತಹಶಿಲ್ದಾರ್ ರಿಂದ 1985 ಸೆಪ್ಟೆಂಬರ್20 ರಂದು ಐಸಿಸಿ ಆರ್/37/1985- 86 ರ ಪರಿಶಿಷ್ಟ ಪಂಗಡದ ಕಾಡ ಕುರುಬ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿ ಕೋಟಾದಲ್ಲಿಯೇ ಶಾಲಾ ಶಿಕ್ಷಕನಾಗಿ ನೇಮಕ ಆಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಸರಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ಸರಕಾರಿ ನೌಕರಿಗೆ ನೇಮಕಾತಿ ಮತ್ತು ಮುಖ್ಯ ಶಿಕ್ಷಕನಾಗಿ ಮುಂಬಡ್ತಿಯನ್ನು ಹಾಗೂ ಇತರೆ ಎಲ್ಲಾ ರೀತಿಯ ಸರಕಾರಿ ಸೌಲಭ್ಯ ಪಡೆದುಕೊಂಡು ಸರಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಂಚನೆ ಮಾಡಿರುವುದು ಸಾಬೀತಾಗಿದೆ ಎಂದು ದೂರು ದಾಖಲಿಸಿ ಮುಂದಿನ ತನಿಖೆಯ ಬಗ್ಗೆ ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ ವರ್ಗಾವಣೆ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next