Advertisement

ಮನಕ್ಕೆ ಆನಂದ ನೀಡುವ ಸಾಹಿತ್ಯ ರಚಿಸಿ

12:17 PM Jan 01, 2018 | |

ಬಸವಕಲ್ಯಾಣ: ಜನಮನ ತಣಿಸುವ, ಮನಸ್ಸಿಗೆ ಆನಂದ ನೀಡುವ, ದಣಿವು ನಿವಾರಿಸುವ ಸಾಹಿತ್ಯ ಹೊರ ಬರಲಿ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು.

Advertisement

ಹುಲಸೂರನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ರವಿವಾರ ನಡೆದ “ಕನ್ನಡ ಸಾಹಿತ್ಯ ಮತ್ತು ಜೀವನ ಪ್ರೀತಿ’ ಗೋಷ್ಠಿಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಾಹಿತ್ಯ ರಚನೆ ಮಾಡುವವರು ಜನ ಸಾಮಾನ್ಯರ ಬಯಕೆಗಳನ್ನು ತಿಳಿದುಕೊಳ್ಳಬೇಕು. ಸಾಹಿತ್ಯ ದಣಿದವರ
ದಣಿವನ್ನು ದೂರಮಾಡಬೇಕು. ಆದರೆ ಮನಸ್ಸಿಗೆ ತಾಪ ನೀಡುವಂತಾಗಬಾರದು. 

ಗ್ರಾಮೀಣ ಜನರಿಗೆ ಆನಂದ ನೀಡುವ, ಮನಸನ್ನು ವಿಕಾಸಗೊಳಿಸುವ ಸಾಹಿತ್ಯ ಬೇಕಿದೆ. ಅಂಥ ಸಾಹಿತ್ಯ ರಚನೆಗೆ ಬರೆಯುವರೆಲ್ಲ ಮುಂದಾದರೆ ಅದನ್ನು ಮನೆ-ಮನೆಯಲ್ಲೂ ಎಲ್ಲರೂ ಓದುತ್ತಾರೆ ಎಂದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡ ಬದಕನ್ನು ಮಧುರಗೊಳಿಸುತ್ತದೆ. ಜೀವನ ಉತ್ಸಾಹ ತುಂಬುತ್ತದೆ. ನಗರ ಪ್ರದೇಶಗಳಲ್ಲಿ ಸಂಪತ್ತು, ಅಧಿಕಾರ ಪ್ರೇಮವಿದೆ. ಆದರೆಗ್ರಾಮೀಣ ಪ್ರದೇಶದಲ್ಲಿ ಶುದ್ಧವಾದ ಕನ್ನಡ ಪ್ರೇಮವಿದೆ. ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ಮಾತುಗಳು, ಜನಪದ ಹಾಡುಗಳು ಹುಟ್ಟಿದ್ದು ಈ ನೆಲದಲ್ಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಮಾತನಾಡಿ, ಸಾಹಿತ್ಯವೇ ಜೀವನ ಪ್ರೀತಿ. ಜೀವನ ಪ್ರೀತಿಯೇ ಸಾಹಿತ್ಯ. ಸಾಹಿತ್ಯ ಇಲ್ಲದೇ ಜೀವನ ಪ್ರೀತಿ ಇಲ್ಲ. ಈ ಎರಡು ಇದ್ದಾಗ ಮಾತ್ರ ಜೀವನಕ್ಕೆ ಅರ್ಥ. ಜೀವ ಮತ್ತು ಜೀವನಕ್ಕೆ ವ್ಯತ್ಯಾಸವಿದೆ. ಜೀವನ ಪ್ರೀತಿಯಲ್ಲಿ ಸಮಷ್ಟಿ ಪ್ರೀತಿ ಅಡಗಿದೆ. ಯಾವುದೇ ಸಾಹಿತ್ಯ
ನಿರ್ದಿಷ್ಟ ವಿಚಾರ ಬದ್ಧತೆಗೆ ಒಳಗಾದಾಗ ಮನುಷ್ಯ ಪ್ರೀತಿಯ ಸೆಲೆ ಕಳಿದುಕೊಳ್ಳುತ್ತದೆ ಎಂದು ವಿಶ್ಲೇಶಿಸಿದರು.

ನೇತೃತ್ವ ವಹಿಸಿದ್ದ ಹುಲಸೂರನ ಶ್ರೀ ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಸಾಯಗಾಂವನ ಶ್ರೀ ಶಿವಾನಂದ ಸ್ವಾಮೀಜಿ, ಭರತನೂರನ ಶ್ರೀ ಗುರು ನಂಜೇಶ್ವರ ಮಹಾಸ್ವಾಮೀಜಿ, ತಿಕೋಟಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಪರಮಾನಂದ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಎಂ.ಜಿ. ದೇಶಪಾಂಡೆ, ಜಿಪಂ ಸದಸ್ಯ ಸುಧೀರ ಕಾಡಾದಿ, ಪ್ರಮುಖರಾದ ಬಿ.ಜಿ. ಶಟಗಾರ, ಗುರುನಾಥ ಕೊಳ್ಳೂರ, ಪ್ರಭುರಾವ್‌ ವಾಸ್ಮತೆ, ಆನಂದ ದೇವಪ್ಪ, ಬಸವರಾಜ ಧನ್ನೂರ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ತಹಶೀಲ್ದಾರ ಜಗನ್ನಾಥ ರೆಡ್ಡಿ, ಶಾಂತಲಿಂಗ ಮಠಪತಿ ಉಪಸ್ಥಿತರಿದ್ದರು. ಶರಣಪ್ಪ ಮಿಠಾರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ ನಿರೂಪಿಸಿದರು. 

ಮಕ್ಕಳ ಗೋಷ್ಠಿ: ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ಚಲನಚಿತ್ರ ನಿರ್ದೇಶಕ ಬಿ.ಜೆ. ವಿಷ್ಣುಕಾಂತ, ಗಣೇಶ ಬಿರಾದಾರ, ಯುಕ್ತಿ ಅರಳಿ, ಸಂಸ್ಕೃತಿ ಚನಶೆಟ್ಟಿ ಮಾತನಾಡಿದರು. ಶಿವಾನಿ ಗಾಯನ ನಡೆಸಿಕೊಟ್ಟರೆ, ಸಿರಿ ಏಕಪಾತ್ರಾಭಿನ ನಡೆಸಿಕೊಟ್ಟರು.

ಸಿದ್ದೇಶ್ವರ ಶ್ರೀ ಪ್ರವಚನ
ಹುಲಸೂರನಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಧ್ಯಾತ್ಮ ಪ್ರವಚನ ನಡೆಬೇಕು ಎನ್ನುವುದು ನಮ್ಮ ಬಹು
ದಿನಗಳ ಬಯಕೆಯಾಗಿದೆ. ಶ್ರೀಗಳು ಇಲ್ಲಿಗೆ ಬಂದು ಒಂದು ತಿಂಗಳ ಕಾಲ ಪ್ರವಚನ ನಡೆಸಿಕೊಡಬೇಕು ಎಂದು
ಹುಲಸೂರನ ಶ್ರೀ ಶಿವಾನಂದ ಮಹಾಸ್ವಾಮೀಜಿ ಮನವಿ ಮಾಡಿದರು. ವೇದಿಕೆಯಲ್ಲಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇದಕ್ಕೆ ಒಪ್ಪಿಗೆ ಸೂಚಿಸಿ, ಆದಷ್ಟು ಬೇಗ ಸಮಯ ನಿಗದ ಪಡಿಸಲಾಗುವುದು ಎಂದರು. ಜನರು ಚಪ್ಪಳೇ ಮೂಲಕ ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next