Advertisement

ಕ್ರೇಜಿ ಕನಸಿನ ಬೋಪಣ್ಣ ಇಂದು ತೆರೆಗೆ

10:08 AM Aug 12, 2022 | Team Udayavani |

ಕ್ರೇಜಿಸ್ಟಾರ್‌ ವಿ. ರವಿಚಂದ್ರನ್‌ ನಟನೆ ಮತ್ತು ನಿರ್ದೇಶನದ “ರವಿ ಬೋಪಣ್ಣ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ “ರವಿ ಬೋಪಣ್ಣ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಬರೋಬ್ಬರಿ 7 ನಿಮಿಷ ಅವಧಿಯ ಟ್ರೇಲರ್‌ನಲ್ಲಿ, ರವಿಚಂದ್ರನ್‌ ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ ಗ್ಲಾಮರಸ್‌ ಆಗಿ ತೆರೆಮೇಲೆ ಮಿಂಚಿದ್ದು, ನಟ ಕಿಚ್ಚ ಸುದೀಪ್‌ ಕೂಡ ಚಿತ್ರದಲ್ಲಿ ಕರಿಕೋಟು ತೊಟ್ಟು ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಖಡಕ್‌ ಡೈಲಾಗ್ಸ್‌, ಎಮೋಶನ್‌ ದೃಶ್ಯಗಳು, ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯ ಕಥೆ ಹೀಗೆ ಒಂದಷ್ಟು ಝಲಕ್‌ “ರವಿ ಬೋಪಣ್ಣ’ನ ಟ್ರೇಲರ್‌ನಲ್ಲಿ ಕಾಣುತ್ತದೆ.

ಇನ್ನು “ರವಿ ಬೋಪಣ್ಣ’ ಸಿನಿಮಾದ ಬಿಡುಗಡೆಗೂ ಮೊದಲು ಮಾತನಾಡಿರುವ ರವಿಚಂದ್ರನ್‌, ತಮ್ಮ ಸಿನಿಮಾದ ಬಿಡುಗಡೆಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ, “ಈ ಸಿನಿಮಾದಲ್ಲಿ ಗ್ಲಾಮರ್‌ ಇದೆ. ಆದ್ರೆ ಗ್ರಾಮರ್‌ ಇಲ್ಲ. ಫ್ಯಾಮಿಲಿ, ಎಮೋಶನ್ಸ್‌, ವ್ಯವಸ್ಥೆ, ಸ್ಕ್ಯಾಮ್ಸ್, ಆ್ಯಕ್ಷನ್‌, ಕಾಮಿಡಿ, ಮ್ಯಾಜಿಕ್‌, ಭ್ರಮೆ ಎಲ್ಲವನ್ನೂ ಸ್ಕ್ರೀನ್‌ ಮೇಲೆ ನೋಡಬಹುದು. ಯಾವಾಗಲೂ ನಮ್ಮೊಳಗೆ ಒಬ್ಬ ಇರುತ್ತಾನೆ. ಅವನು ನಮ್ಮನ್ನು ನೋಡಿ ನಗುತ್ತಿರುತ್ತಾನೆ. ಅವನನ್ನು ಈ ಸಿನಿಮಾದಲ್ಲಿ ಸ್ಕ್ರೀನ್‌ ಮೇಲೆ ತಂದಿದ್ದೀನಿ’ ಎನ್ನುತ್ತಾರೆ ರವಿಚಂದ್ರನ್‌.

ಇದನ್ನೂ ಓದಿ:ಗಾಳಿಪಟ -2 ಇಂದಿನಿಂದ ಹಾರಾಟ: ಗಣೇಶ್-ಭಟ್ರ ಚಿತ್ರ

ಇನ್ನು “ರವಿ ಬೋಪಣ್ಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿರುವ ರವಿಚಂದ್ರನ್‌, “ನನಗೂ ಸುದೀಪ್‌ ಗೂ ಅವಿನಾಭಾವ ಸಂಬಂಧ. ಅದನ್ನು ಬಾಯಿ ಮಾತಿನಲ್ಲಿ ಹೇಳ್ಳೋಕೆ ಆಗಲ್ಲ. ಅವನು ಎಲ್ಲಿಗೋ ಹೋಗುತ್ತಿರುತ್ತಾನೆ. ನಾನು ಪೋನ್‌ ಮಾಡಿ, ನನ್ನ ಹೊಸ ಸಿನಿಮಾದಲ್ಲಿ ಒಂದು ಕ್ಯಾರೆಕ್ಟರ್‌ ಇದೆ ಅಂತೀನಿ. ಅವನು ಬೇರೇನೂ ಕೇಳದೆ, ಯಾವಾಗ? ಎಲ್ಲಿಗೆ ಬರಬೇಕು? ಅಂತ ಕೇಳಿದ. ಯಾವ ಜನ್ಮದಲ್ಲಿ ನಾವಿಬ್ಬರೂ ಏನಾಗಿದ್ದೆವೋ ಗೊತ್ತಿಲ್ಲ. ಈ ಸಿನಿಮಾಕ್ಕೆ ಒಂದು ವಾಯ್ಸ ಬೇಕಾಗಿತ್ತು. ಕರೆಂಟ್‌ ಹೊಡೆದ ಹಾಗಿರಬೇಕು. ಕನ್ನಡ ಚಿತ್ರರಂಗದಲ್ಲಿ ಅಂಥದ್ದೊಂದು ವಾಯ್ಸ್ ಇರೋದು ಸುದೀಪ್‌ಗೆ ಮಾತ್ರ. ಇಡೀ ಸಿನಿಮಾದಲ್ಲಿ ಎರಡು ಗಂಟೆಗಳ ಕಾಲ ನಾನಿದ್ದರೆ, ಸುದೀಪ್‌ 5 ನಿಮಿಷ ಮಾತ್ರ ಇರುತ್ತಾನೆ. ಅವನ ವಾಯ್ಸ ಇಡೀ ಸಿನಿಮಾವನ್ನು ಜಸ್ಟಿಫೈ ಮಾಡುತ್ತದೆ’ ಎನ್ನುತ್ತಾರೆ.

Advertisement

ಇನ್ನು “ರವಿ ಬೋಪಣ್ಣ’ ಸಿನಿಮಾದಲ್ಲಿ ರವಿಚಂದ್ರನ್‌, ಸುದೀಪ್‌, ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ ಅವರೊಂದಿಗೆ ರಾಮಕೃಷ್ಣ, ಜೈ ಜಗದೀಶ್‌, ರವಿಶಂಕರ್‌ ಗೌಡ, ಮೋಹನ್‌ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಜಿ. ಎಸ್‌. ವಿ ಸೀತಾರಾಮ್‌ ಛಾಯಾಗ್ರಹಣವಿದೆ.

ಜಿ.ಎಸ್‌.ಕಾರ್ತಿಕ ಸುಧನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next