Advertisement
ಬಜಾಜ್ ಪಲ್ಸರ್ ಎನ್‌ಎಸ್ 200ಬಜಾಜ್ ಸಂಸ್ಥೆಯ ಜನಪ್ರಿಯ ಬೈಕ್‌ಗಳಲ್ಲಿ ಇದೂ ಒಂದು. ಸದ್ಯಕ್ಕೆ ಎಲ್ಲಾ ವಯಸ್ಸಿನವರೂ ಮೆಚ್ಚಿಕೊಂಡಿರುವ ಮಾಡೆಲ್ ಇದು. 199.5 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 23.5 ಬಿಎಚ್‌ಪಿ ಶಕ್ತಿ ಉತ್ಪಾದನೆಯ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಎಂಥದೇ ಆಫ್ರೋಡ್‌ನಲ್ಲಿಯೂ ಸಲೀಸಾಗಿ ಜಗ್ಗುವ ಸಾಮರ್ಥ್ಯವನ್ನು ಎನ್‌ಎಸ್ 200 ಸ್ಟಾಂಡರ್ಡ್ ಹಾಗೂ ಎನ್‌ಎಸ್200 ಎಬಿಎಸ್ ಹೊಂದಿದೆ. ಸುರಕ್ಷತೆ ಹಾಗೂ ಸ್ಪೀಡ್ ಕಂಟ್ರೋಲ್‌ಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಎಕ್ಸ್ ಶೋ ರೂಂ ಬೆಲೆ: ಎನ್‌ಎಸ್200 ಸ್ಟಾಂಡರ್ಡ್-99,411 ರೂ./ ಎನ್‌ಎಸ್200 ಎಬಿಎಸ್- 1,11,411
ಹೀರೋ ಸಂಸ್ಥೆಯ ಬೇಡಿಕೆಯ ಬೈಕ್‌ಗಳಲ್ಲಿ ಎಕ್ಸ್‌ಸ್ಟ್ರೀಮ್ 200ಆರ್ ಕೂಡ ಒಂದು. ಭಾರತದ ನೈರುತ್ಯ ಉತ್ತರ ರಾಜ್ಯಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಬೇಡಿಕೆ ಹೆಚ್ಚಿಸಿಕೊಂಡಿರುವ ಹೀರೋ, ಎಲ್ಲಾ ರಾಜ್ಯಗಳಿಂದಲೂ ಉತ್ತಮ ಬೇಡಿಕೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದೆ. ಹಿಂದಿನ ವರ್ಷನ್‌ಗಿಂತಲೂ ಹೊಸ ವರ್ಷನ್‌ನಲ್ಲಿ ಕೆಲ ಮಹತ್ವದ ಬದಲಾಣೆಗಳನ್ನು ಮಾಡಲಾಗಿದೆ. ಎಬಿಎಸ್ ಸ್ಟಾಂಡರ್ಡ್ ಫೀಚರ್‌ಗಳನ್ನು ಹೊಂದಿರುವ ಈ ಬೈಕ್ 200ಸಿಸಿ ಎಂಜಿನ್‌ನೊಂದಿಗೆ 18.1ಬಿಎಚ್‌ಪಿ ಮತ್ತು 17.1ಎನ್‌ಎಂ ಶಕ್ತಿ ಉತ್ಪಾದನೆಯಿಂದ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿ ಲೀಟರ್‌ಗೆ 40-45 ಕಿ.ಮೀ. ಮೈಲೇಜ್ ಹೊಂದಿದೆ.
ಎಕ್ಸ್ ಶೋ ರೂಂ ಬೆಲೆ: 88,000 ರೂ. ಟಿಎಸ್ ಅಪಾಚೆ ಆರ್‌ಟಿಆರ್ 200 4
ಭಾರತೀಯ ಮೂಲದ ವಾಹನ ತಯಾರಿಕಾ ಕಂಪನಿಯ ಭಾರೀ ಬೇಡಿಕೆಯ ಬೈಕ್. ಅದರಲ್ಲೂ ಹುಡುಗರ ಅಚ್ಚುಮೆಚ್ಚಿನ ಬೈಕ್ ಇದು. ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಿರುವ ಅಪಾಚೆ ಆರ್‌ಟಿಆರ್, ತುಂಬಾ ಅಗ್ರೆಸ್ಸಿವ್ ಸೆಗೆ¾ಂಟ್‌ಗಳ ಸಾಲಿನಲ್ಲಿರುವ ಬೈಕ್. ಎಬಿಎಸ್ ಹಾಗೂ ನಾನ್ ಎಬಿಎಸ್ ವರ್ಷನ್‌ಗಳೂ ಲಭ್ಯ. 197ಸಿಸಿ ಎಂಜಿನ್, 20.7ಬಿಎಚ್‌ಪಿ ಮತ್ತು 18.1ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕ್‌ನಲ್ಲಿ ಹೆಚ್ಚೆಚ್ಚು ಡಿಜಿಟಲ್ ಆಪ್ಶನ್‌ಗಳನ್ನು ಅಳವಾಡಿಸಲಾಗಿದೆ.
ಎಕ್ಸ್ ಶೋ ರೂಂ ಬೆಲೆ: 1.01 ಲಕ್ಷ ರೂ.ನಿಂದ 1.16 ಲಕ್ಷ ರೂ.
Related Articles
ಕ್ರೇಜಿ ಹುಡುಗರ ಬಿಂದಾಸ್ ಬೈಕ್ ಇದು. ಯಮಹಾ ಸಂಸ್ಥೆಯ ವಿನ್ಯಾಸವನ್ನೇ ಇಷ್ಟಪಟ್ಟು ಖರೀದಿಸುವ ಒಂದು ಗ್ರಾಹಕ ಸಮೂಹವೇ ಇದೆ. ಎಫ್ಝಡ್25 ಕೂಡ ಭಿನ್ನ ವಿನ್ಯಾಸದಿಂದ ಕೂಡಿರುವ ಡಿಜಿಟಲ್ ಹಾಗೂ ಅತ್ಯಾಧುನಿಕ ತಂತ್ರಜಾnನಗಳಿಂದ ಕೂಡಿರುವ ಬೈಕ್ ಇದಾಗಿದೆ. ಎಫ್ಝಡ್25 245ಸಿಸಿ ಎಂಜಿನ್ ಸೆಗೆ¾ಂಟ್‌ನಲ್ಲಿಯೂ ಲಭ್ಯವಿದ್ದು 20ಬಿಎಚ್‌ಪಿ, 20ಎನ್‌ಎಂ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. 6ಸ್ಪೀಡ್ ಗೇರ್‌ಬಾಕ್ಸ್‌ನಿಂದ ಕೂಡಿರುವ ಈ ಬೈಕ್‌ನ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಕಿ.ಮೀ.
– ಎಕ್ಸ್ ಶೋ ರೂಂ ಬೆಲೆ: 1.19 ಲಕ್ಷ ರೂ.
Advertisement
ಕೆಟಿಎಂ 200 ಡ್ನೂಕ್ಕೆಟಿಎಂ ಬಜಾಜ್ ಆಟೋ ಅವರ ಅತ್ಯಂತ ಬೇಡಿಕೆಯ ಬೈಕ್‌ಗಳಲ್ಲಿ 200 ಡ್ನೂಕ್ ಕೂಡ ಒಂದು. ಡ್ನೂಕ್ ಆಗಿರುವ ಕಾರಣ ಉಳಿದ ಬೈಕ್‌ಗಳ ಬೆಲೆಗೆ ಹೋಲಿಸಿದರೆ ಕೊಂಚ ತುಟ್ಟಿ ಅನಿಸಬಹುದು. ಆದರೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಬೈಕ್ ಇದಾಗಿದೆ. ಸಿಂಗಲ್ ಸಿಲಿಂಡರ್ 200ಸಿಸಿ ಎಂಜಿನ್ ಹೊಂದಿದ್ದು, 25ಬಿಎಚ್‌ಪಿ, 19.2ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ. 6ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಕೆಟಿಎಂ 200 ಡ್ನೂಕ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 35 ಕಿ.ಮೀ. ಮೈಲೇಜ್ ಹೊಂದಿದೆ.
– ಎಕ್ಸ್ ಶೋ ರೂಂ ಬೆಲೆ: 1.46 – ಗಣಪತಿ ಅಗ್ನಿಹೋತ್ರಿ