Advertisement

ಗ್ರಾಪಂ ಸದಸ್ಯ ಸ್ಥಾನಗಳ ಹರಾಜು ನಿಲ್ಲಿಸಲು ಆಗ್ರಹ

02:19 PM Dec 08, 2020 | Suhan S |

ಮಂಡ್ಯ: ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಹರಾಜು ಮಟ್ಟ ಹಾಕುವಂತೆ ಒತ್ತಾಯಿಸಿ, ಸಿಪಿಎಂ (ಐ)ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆಗೆಮುಕ್ತ ಅವಕಾಶ ನಿಷೇಧಿಸಿ ಗ್ರಾಮ ಮಟ್ಟದಲ್ಲಿ ಬಹಿರಂಗಹರಾಜು ನಡೆಸಿ, ಲಕ್ಷಾಂತರ ರೂ. ಪಂಚಾಯಿತಿಸ್ಥಾನಗಳನ್ನು ಮಾರಾಟ ಮಾಡುವ ಅನಿಷ್ಠ ಹರಾಜುಪದ್ಧತಿಯು ಜಿಲ್ಲೆಯ ಕೆಲವು ಕಡೆ ಕಂಡು ಬಂದಿದೆ.ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಯೋಜನೆಗಳ ಜಾರಿ ಅಸಾಧ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ, ಗುಳಘಟ್ಟ, ಮದ್ದೂರಿನ ಕೆಸ್ತೂರು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್‌ 1, 2ಸ್ಥಾನಗಳನ್ನು ಹರಾಜು ಈಗಾಗಲೇ ನಡೆದಿರುವ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿಹರಿದಾಡುತ್ತಿದೆ. ಇಂತಹ ಹರಾಜಿನಲ್ಲಿಕೊಳ್ಳಲುಆದಾಯದ ಮೂಲ, ಹಣ ಯಾರ ಸುಪರ್ದಿ ಮತ್ತು ಯಾವ ಉದ್ದೇಶಕ್ಕಾಗಿ ಬಳಕೆಯಾ ಗುತ್ತದೆ ಎಂಬುದನ್ನುತನಿಖೆ ಮಾಡಬೇಕು. ಇಂತಹ ಹರಾಜು ಪ್ರಕ್ರಿಯೆ ಗಳಿಂದ ಗ್ರಾಪಂ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಡಲು ಸಾಧ್ಯವಾಗದೆ ಸದಸ್ಯ ರಾದವರು ಭ್ರಷ್ಟಾ ಚಾರಿಗಳಾಗುತ್ತಾರೆ ಎಂದರು.

ಸೂಕ್ತ ವ್ಯವಸ್ಥೆ ಮಾಡಿ: ಕೂಡಲೇ ಹರಾಜಿನ ಮೂಲಕ ಅಥವಾ ಇನ್ಯಾವುದೇ ಬೆದರಿಕೆ ಮೂಲಕಚುನಾವಣೆ ಪ್ರಕ್ರಿಯೆಗಳನ್ನು ಹಾದಿ ತಪ್ಪಿಸದಂತೆಸೂಕ್ತ ಮುತುವರ್ಜಿ ವಹಿಸಬೇಕು. ದೂರು ಬರುವವರೆಗೂ ಕಾಯದೆ ಗುಪ್ತಚರ ಮೂಲಕ ಸೂಕ್ತ ಚುನಾವಣಾ ವೀಕ್ಷಕರ ನೇಮಕದ ಮೂಲಕ ವರದಿ ತರಿಸಿಕೊಂಡು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ಖಾತ್ರಿಪಡಿಸಬೇಕು. ಹರಾಜಿ ನಂತಹ ಕೆಲಸಗಳಲ್ಲಿ ಯಾರೂ ತೊಡಗದಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಗ್ರಾಪಂ ಮಟ್ಟದ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲು ಅಡ್ಡಿ ಕಂಡು ಬಂದರೆ ನೇರವಾಗಿ ತಾಲೂಕು ಚುನಾ ವಣಾಧಿಕಾರಿಗೆ ನಾಮಪತ್ರ ಸಲ್ಲಿಸಲು ಅದೇ ದಿನ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಕಾರ್ಯದರ್ಶಿ ಎಂ.ಪುಟ್ಟಮಾಧು, ಜಿ.ರಾಮಕೃಷ್ಣ, ಸಿ.ಕುಮಾರಿ, ದೇವಿ,ಟಿ.ಯಶವಂತ, ಸುಶೀಲ, ಎನ್‌.ಎಲ್‌.ಭರತ್‌ರಾಜ್‌, ಲಿಂಗರಾಜ ಮಾಣಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next