Advertisement

ಬಂಗಾಲದಲ್ಲಿ ಮೇಜರ್‌ ಸರ್ಜರಿಯತ್ತ ಸಿಪಿಎಂ, ಹಳಬರಿಗೆ ಗುಡ್‌ ಬೈ

12:01 PM Mar 07, 2018 | udayavani editorial |

ಕೋಲ್ಕತ : ಬಂಗಾಲ ರಾಜಕಾರಣದಲ್ಲಿ ತನ್ನ ಮಹತ್ವವನ್ನು ಬಹಳ ಬೇಗನೆ ಕಳೆದುಕೊಳ್ಳುತ್ತಿರುವ ಸಿಪಿಎಂ ಪಕ್ಷ ತನ್ನ ಸಂಘಟನೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಕಾಯಕಲ್ಪ ಚಿಕಿತ್ಸೆಯನ್ನು ನೀಡಲು ಮುಂದಾಗಿದೆ. 

Advertisement

ಪರಿಣಾಮವಾಗಿ ಪಕ್ಷದಲ್ಲಿ ವಯಸ್ಸಾಗಿರುವ ಹಳೇ ನಾಯಕರಿಗೆ ವಿಶ್ರಾಂತಿ ನೀಡಿ ಯುವಕರನ್ನು ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವ ಅಭಿಯಾನವನ್ನು ಸಿಪಿಎಂ ಆರಂಭಿಸಿದೆ. 

ಸ್ಥಳೀಯ ಚುನಾವಣೆಗಳನ್ನು ಕೂಡ ಗೆಲ್ಲಲಾಗದ ಸ್ಥಿತಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಸಿಪಿಎಂ ಇದೀಗ ರಾಜ್ಯದ 23 ಜಿಲ್ಲೆಗಳಲ್ಲಿ 300 ಯುವ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಇದೇ ವೇಳೆ 60ರಿಂದ 80 ವರ್ಷ ವಯಸ್ಸಿನ ಗುಂಪಿನಲ್ಲಿರುವ ಶೇ.70ರಷ್ಟು ನಾಯಕರಿಗೆ ಪಕ್ಷದಿಂದ ವಿರಮಿಸುವಂತೆ ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next