ಗಂಗಾವತಿ : ಒಂದೇ ದಿನದಲ್ಲಿ 2 ಬಾರಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟಿಸಿದರು.
ಕಳೆದ 10 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ರೂ. 7, ಮನೆಬಳಕೆ ಗ್ಯಾಸ್ ಬೆಲೆ ರೂ. 50, ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ರೂ. 250 ಜಾಸ್ತಿಯಾಗಿದೆ.
ತೈಲ ಮಾರಾಟ ಮಾಡುವ ಸ್ವಾಯತ್ತ ಸಂಸ್ಥೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಕುಂಟು ನೆಪ ಹೇಳುವುದು ಸರಿಯಲ್ಲ.ಇದರಿಂದ ಪ್ರತಿನಿತ್ಯ ದುಡಿದು ತಿನ್ನುವವರಿಗೆ ಕಷ್ಟವಾಗುತ್ತದೆ.
ಈ ಸಂದರ್ಭದಲ್ಲಿ ಸಿಪಿಐಎ೦ ಪಕ್ಷದ ಮುಖಂಡರಾದ ಕೆ.ಹುಸೇನಪ್ಪ ಮಂಜುನಾಥ್ ಡಗ್ಗಿ, ಶಿವಣ್ಣ ಬೆಣಕಲ್, ಮರಿನಾಗಪ್ಪ ಡಗ್ಗಿ, ಶ್ರೀನಿವಾಸ್ ಹೊಸಳ್ಳಿ ,ಬಾಳಪ್ಪ ಹುಲಿಹೈದರ್, ಕೃಷ್ಣಪ್ಪ ,ಟಿ ನಬೀಸಾಬ್, ರಮೇಶ್ ಡಂಕನಕಲ್, ನಾಗಮ್ಮ ವಡ್ಡರಹಟ್ಟಿ ಇದ್ದರು.
ಇದನ್ನೂ ಓದಿ : ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಬೆಂಗಳೂರು ಮೂಲದ ರಿಕಿ ಕೇಜ್