Advertisement

ಕೃಷಿ ಲಾಭದಾಯಕವಾಗಿಸಲು ಸಿಪಿಐ ಆಗ್ರಹ

10:18 AM Jul 26, 2017 | |

ಬೀದರ: ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

Advertisement

ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ಮೂಲಕ ಆಗಮಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಕೃಷಿಯನ್ನು ಮರ್ಯಾದೆ ಕಾಯಕವೆಂದು ಭಾವಿಸಲಾಗಿತ್ತು. ಸರ್ಕಾರಿ ನೌಕರಿ ಮಾಡುವುದು ಕನಿಷ್ಠ ಎಂದು ಪರಿಗಣಿಸಲಾಗಿತ್ತು. ಆದರೆ, 70 ವರ್ಷಗಳ ಸ್ವತಂತ್ರ ಭಾರತದಲ್ಲಿ ಸದ್ಯ ಕೃಷಿ ಕಾಯಕವನ್ನು ರೈತರು ಕೈಬಿಡಲು ಮುಂದಾಗಿದ್ದು, ಇದಕ್ಕೆ ಕೃಷಿ ಯು ಒಂದು ಲಾಭದಾಯಕ ಉದ್ಯೋಗ ಆಗದಿರುವುದು
ಕಾರಣ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ದಲ್ಲಾಳಿಗಳು, ಬೀಜ ಮತ್ತು ಗೊಬ್ಬರ ಕಾರ್ಖಾನೆ ಮಾಲೀಕರು ಕೋಟ್ಯಧಿಪತಿ ಆಗುತ್ತಿದ್ದಾರೆ. ರೈತರಿಗೆ ನ್ಯಾಯ ಸಮ್ಮತ ಬೆಲೆ ಸಿಗುತ್ತಿಲ್ಲ. ಇದನ್ನು ಪ್ರಶ್ನಿಸಿದ ರೈತರ ಮೇಲೆಯೇ ಗೋಲಿ ಬಾರ್‌ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಕೃತ ಮತ್ತು ಪ್ರಾದೇಶಿಕ ಬ್ಯಾಂಕ್‌ಗಳಿಂದ ರೈತರ ಎಲ್ಲ ತರಹದ ಸಾಲಗಳನ್ನು ಮನ್ನಾ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಬೆಳೆಗೆ ಕನಿಷ್ಠ ಬೆಂಬಲ
ಬೆಲೆ ನಿಗದಿಪಡಿಸಬೇಕು. ಇದಕ್ಕಾಗಿ ಒಂದು ಲಕ್ಷ ಕೋಟಿ ಬೆಲೆ ನಿಯಂತ್ರಣ ನಿಧಿ ಬಿಡುಗಡೆ ಮಾಡಬೇಕು. ಬೀಜ, ಗೊಬ್ಬರ,
ಔಷಧ, ಪಂಪ್‌ಸೆಟ್‌, ಜನರೇಟರ್‌ ಗಳ ಮಾರಾಟಗಳನ್ನು ಜಿಎಸ್‌ಟಿಯಿಂದ ಹೊರಗಿರಿಸಬೇಕು. ಕೃಷಿಕರು ಮತ್ತು ಕೃಷಿ
ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ಗೌರವ ಧನ ನೀಡಬೇಕು ಹಾಗೂ ಬಗರ ಹುಕುಂ ಕೃಷಿ  ಕ್ರಮಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಿಪಿಐ ಕಾರ್ಯದರ್ಶಿ ಬಾಬುರಾವ್‌ ಹೊನ್ನಾ, ಪ್ರಮುಖರಾದ ಪ್ರಭುರಾವ್‌ ಕರನಾಯಕ, ಪ್ರಭು ಹೊಚಕನಳ್ಳಿ, ಮುನಿರೊದ್ದೀನ್‌, ರಾಮಯ್ಯ ಮಠಪತಿ, ಪಾಂಡುರಂಗ ಪ್ಯಾಗೆ, ಗುರುನಾಥ ಬಿರಾದಾರ, ಬಾಬುರಾವ್‌ ವಾಡೇಕರ್‌, ವೀರಶೆಟ್ಟಿ ಕುಂಬಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next