Advertisement

ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಸಿಪಿಐ ಚಾಲನೆ

05:04 PM Aug 11, 2022 | Team Udayavani |

ಕಲಬುರಗಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ ಸರಕಾರಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರ್‌ ಜಿಲ್ಲಾ ಮಹಾವಿದ್ಯಾಲಯ ಮಟ್ಟದ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಎಂ.ಬಿ.ನಗರ ಪೊಲೀಸ್‌ ಠಾಣೆ ಸಿಪಿಐ ಚಂದ್ರಶೇಖರ ತಿಗಡಿ ಎರಡು ಸುತ್ತು ಕಾಕ್‌ ಹೊಡೆಯುವ ಮೂಲಕ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು, ದೈಹಿಕ ಕಸರತ್ತು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಶ್ರಮದ ಅವಶ್ಯಕತೆ ತಿಳಿ ಹೇಳುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಯಾಶೀಲತೆಯನ್ನು ಕಲಿಯಬೇಕು ಎಂದರು.

ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ|ಕಲ್ಯಾಣರಾವ ಪಾಟೀಲ, ಪ್ರಾಂಶುಪಾಲ ಡಾ| ಶಂಕ್ರಪ್ಪ ಎಸ್‌.ಹತ್ತಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ವಿಜಯಕುಮಾರ ಹೆಬ್ಟಾಳಕರ್‌, ನಿರ್ಣಾಯಕ ಎಂ.ಡಿ ಫಿರೋಜ್‌, ದೈಹಿಕ ಶಿಕ್ಷಣ ವಿಭಾಗದ ಸದಸ್ಯರಾದ ಡಾ|ಸಬಿತಾ ತಿವಾರಿ, ಡಾ|ಭಾಗಪ್ಪ ಛಲವಾದಿ, ಡಾ|ವಿಜಯಕುಮಾರ ಸಾಲಿಮನಿ, ಭುವನೇಶ್ವರಿ, ಡಾ|ಸುರೇಶ್‌ ಮಾಳೆಗಾಂವ, ಪ್ರೊ|ರೆಹಮನ್‌ ಮಹ್ಮದ ಸಾಬ್‌, ಡಾ| ಮಹಾಂತೇಶ ನಂದೆಪ್ಪನವರ್‌, ಪ್ರೊ|ಚಂದ್ರಶೇಖರ ಅನಾದಿ, ಡಾ|ಶಿವಲಿಂಗಪ್ಪ ಪಾಟೀಲ, ಡಾ|ಅನುಸೂಯಾ ಗಾಯಕವಾಡ್‌, ಚಂದ್ರಕಾಂತ ಶಿರೋಳ್ಳಿ, ಡಾ|ಉತ್ತಮ ಕಾಂಬಳೆ, ಡಾ|ಶ್ರೀನಿವಾಸ ಆಚಾರ್ಯ, ಡಾ|ವಿಜಯಕುಮಾರ ವಿಠuಲರಾವ್‌, ರಾಜೇಶ್‌ ಅಜಯಸಿಂಗ್‌ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next