Advertisement

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

11:35 AM Nov 27, 2022 | Team Udayavani |

ಹುಮನಾಬಾದ: ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಒಂದೇ ದಿನದಲ್ಲಿ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಡಾ। ಚಂದ್ರಶೇಖರ ಪಾಟೀಲ ಹಾಗೂ ಭೀಮರಾವ ಪಾಟೀಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ತಾಲೂಕಿನ ಘಾಟಬೋರಳ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು, ಇಂತಹ ಘಟನೆಗಳು ಗ್ರಾಮಕ್ಕೆ ಅವಮಾನ ಉಂಟು ಮಾಡುತ್ತವೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಕೆಲ ಮಾಹಿತಿಗಳು ಲಭ್ಯವಾಗಿದ್ದು, ಕೂಡಲೇ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲಿದ್ದಾರೆ. ಪೊಲೀಸ್ ಕಾರ್ಯಕ್ಕೆ ಗ್ರಾಮದ ಎಲ್ಲಾ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮಹಿಳೆಯರು, ಒಂದೇ ರಸ್ತೆಯಲ್ಲಿ ವಿವಿಧ ವೃತ್ತಗಳಿವೆ. ಮಹಾನುಭಾವರ ಭಾವಚಿತ್ರಕ್ಕೆ ಯಾವತ್ತು ಅವಮಾನ ಉಂಟಾಗುತ್ತಿಲ್ಲ. ಆದರೆ ಅಂಬೇಡ್ಕರ್ ಭಾವಚಿತ್ರಕ್ಕೆ ಯಾಕೆ ಪದೆ ಪದೆ ಅವಮಾನ ಆಗುತ್ತಿದೆ ಎಂದು ಪ್ರಶ್ನಿಸಿದರು. ಕೂಡಲೇ ಗ್ರಾಮ ಪಂಚಾಯತ್ ವತಿಯಿಂದ ಸಿಸಿಟಿವಿ ಅಳವಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಭೀಮರಾವ ಪಾಟೀಲ, ಪಂಚಾಯತ್ ವತಿಯಿಂದ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸುತ್ತಾರೆ. ಅಲ್ಲದೆ, ಶಾಸಕರು ಈಗಾಗಲೇ 5 ಲಕ್ಷ ಅನುದಾನ ನೀಡಿದ್ದು, ಕೂಡಲೆ ಕಾಮಗಾರಿ ಮುಗಿಸಿ ವೃತ್ತ ಉದ್ಘಾಟನೆ ಮಾಡೊಣ ಎಂದರು.

ವೃತ್ತದಲ್ಲಿ ನೂರಾರು ಮಹಿಳೆಯರು, ಗ್ರಾಮದ ಮುಖಂಡರು ಇದ್ದರು. ಸಿಪಿಐ ಶರಣಸಪ್ಪ ಕೋಡ್ಲಾ, ಪಿಎಸ್ಐ ಮಂಜನಗೌಡ್ ಪಾಟೀಲ, ತಹಶೀಲ್ದಾರ ಪ್ರದೀಪಕುಮಾರ ಸೇರಿದಂತೆ ಇತರರು ಸ್ಥಳದಲ್ಲಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next