Advertisement

ಚಾ.ನಗರ: ಕೋವಿಡ್‍ನಿಂದ 9 ಮಂದಿ ಸಾವು

09:31 PM Apr 30, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ.  420 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 147ಕ್ಕೇರಿದೆ.

Advertisement

ಯಳಂದೂರು ತಾಲೂಕಿನ 90 ವರ್ಷದ ವೃದ್ಧ, ಚಾಮರಾಜನಗರ ಪಟ್ಟಣದ 56 ವರ್ಷದ ವ್ಯಕ್ತಿ,  ಹನೂರು ತಾಲೂಕಿನ ಕೂಡ್ಲೂರು ಗ್ರಾಮದ 55 ವರ್ಷದ ವ್ಯಕ್ತಿ, ಕೊಳ್ಳೇಗಾಲ ತಾಲೂಕಿನ ಹೊಸಪಾಳ್ಯ ಗ್ರಾಮದ 68 ವರ್ಷದ ವೃದ್ಧ, ಚಾಮರಾಜನಗರ ತಾಲೂಕು ಹುಲ್ಲೇಪುರ ಗ್ರಾಮದ 55 ವರ್ಷದ ವ್ಯಕ್ತಿ,  ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ 65 ವರ್ಷದ ವೃದ್ಧ, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ 55 ವರ್ಷದ ವ್ಯಕ್ತಿ, ಚಾ.ನಗರ ತಾಲೂಕು ಮೂಡ್ನಾಕೂಡು ಗ್ರಾಮದ 60 ವರ್ಷದ ವೃದ್ಧೆ, ಚಾಮರಾಜನಗರ ಪಟ್ಟಣದ 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಕೋವಿಡ್ ಅಂಕಿ ಅಂಶ  ಚಾಮರಾಜನಗರ

ಇಂದಿನ ಪ್ರಕರಣ: 420

ಇಂದು ಗುಣಮುಖ: 238

Advertisement

ಒಟ್ಟು ಗುಣಮುಖ: 8534

ಇಂದಿನ ಸಾವು: 09

ಒಟ್ಟು ಸಾವು: 147

ಸಕ್ರಿಯ ಪ್ರಕರಣಗಳು: 2312

ಒಟ್ಟು ಸೋಂಕಿತರು: 11004

Advertisement

Udayavani is now on Telegram. Click here to join our channel and stay updated with the latest news.

Next