Advertisement

ಸಾಮಾಜಿಕ ಅಂತರದಿಂದ ಕೋವಿಡ್‌ 19 ನಿಯಂತ್ರಣ

06:49 AM May 15, 2020 | Team Udayavani |

ತುಮಕೂರು: ಜಿಲ್ಲೆಯಲ್ಲಿ ಕೋವಿಡ್‌-19 ಹರಡದಂತೆ ಕಾಪಾಡುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟು ಮತ್ತಿತರ ಸಾಮಾಜಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಜೆ.ಸಿ.ಮಾಧುಸ್ವಾಮಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದರು.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಕ್ಕದ ಜನರು ಕೆಮ್ಮುವಾಗ, ಸೀನುವಾಗ ಎಚ್ಚರವಹಿಸಬೇಕು ಎಂದರು. ಮನೆಯಲ್ಲೇ ಪ್ರಾರ್ಥನೆ ಮಾಡಿ:ಈಗಾಗಲೇ ಮುಸ್ಲಿಮರು ಪವಿತ್ರ ರಂಜಾನ್‌ ಹಬ್ಬ ಪ್ರಯುಕ್ತ ಪ್ರಾರ್ಥನೆ ಮಾಡುವವರು ಈದ್ಗಾಗೆ ಹೋಗುವುದು ಬೇಡ. ಇದರಿಂದ ಹಲವರಿಗೆ ತೊಂದರೆಯಾಗುತ್ತದೆ. ಈಗ ಹಗ್‌ ಮಾಡುವುದು  ಬೇಡ. ಆದ್ದರಿಂದ ಮುಸ್ಲಿಮರು ಮನೆಯಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿ ಎಂದು ತಿಳಿಸಿದರು.

ಟಾರ್ಗೆಟ್‌ ಮಾಡಬಾರದು: ಕೋವಿಡ್‌ 19 ಎಂಬುದು ಒಂದು ಸಮುದಾಯದ ಜನರಿಗೆ ಮಾತ್ರ ಬರುವಂತಹದ್ದಲ್ಲ. ಸಾರ್ವಜನಿಕರು ಕೇವಲ ಒಂದು ಸಮುದಾಯವನ್ನು ಟಾರ್ಗೆಟ್‌ ಮಾಡಬಾರದು. ಕಾಯಿಲೆ ಪ್ರತಿಯೊಬ್ಬರಿಗೂ ಬರುತ್ತದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಇಲ್ಲಿ ಯಾರು ಕೂಡ ಹೊರಗಿನವರಲ್ಲ. ನಾವು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು.

ಸಮುದಾಯದವರನ್ನು ಕೆಲವೊಂದು ಹಳ್ಳಿ ಗಳಿಗೆ ಬಿಟ್ಟುಕೊಳ್ಳದೆ ಅವರದೊಂದಿಗೆ ವ್ಯವ ಹಾರ ಮಾಡುವುದನ್ನೆ ಬಿಟ್ಟಿದ್ದಾರೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ವರ್ತಿಸಬೇಕು ಎಂದು ಮನವಿ ಮಾಡಿಕೊಂಡರು. ಶಾಸಕ ಜಿ.ಬಿ ಜ್ಯೋತಿಗಣೇಶ್‌ ಮಾತನಾಡಿ, ನಗರದಲ್ಲಿ ಪಿಎಚ್‌ ಕಾಲೋನಿ, ಕೆಎಚ್‌ಬಿ ಕಾಲೋನಿಯಲ್ಲಿರುವ ಕಂಟೈನ್ಮೆಂಟ್‌ ವಲಯ ದಲ್ಲಿ ಬಡ ಜನರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನನಿತ್ಯ ಹಾಲು ಮತ್ತು ಆಹಾರ ಧಾನ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ರ್‍ಯಾಂಡಮ್‌ ಪರೀಕ್ಷೆ: ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಮಾತನಾಡಿ, ನಗರದಲ್ಲಿ ಪಿಎಚ್‌ ಕಾಲೋನಿ, ಕೆಎಚ್‌ಬಿ ಕಾಲೋನಿಗಳ ಕಂಟೈನ್ಮೆಂಟ್‌ ವಲಯದಲ್ಲಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಆದರೆ ಬಫ‌ರ್‌ ವಲಯ ಗಳಲ್ಲಿ ಅಗತ್ಯ ವಸ್ತುಗಳ ಸಂಚಾರಕ್ಕೆ ಅವಕಾಶ  ವಿದೆ. ಈ ವ್ಯಾಪ್ತಿಯಲ್ಲಿರುವ ಜನರಿಗೆ ರ್‍ಯಾಂಡಮ್‌ ಆಗಿಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದರು.

Advertisement

ಪಾಲಿಕೆ ಮೇಯರ್‌ ಫ‌ರೀದಾ ಬೇಗಂ ಮಾತ ನಾಡಿ, ಬಫ‌ರ್‌ ವಲಯದಲ್ಲಿ ಕುಡಿವ ನೀರಿನ ಬೋರ್‌ಗಳು ಕೆಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡಲೂ ಅ ಜನರು ಬರುತ್ತಿಲ್ಲ ಎಂದರು. ಎಸ್ಪಿ ಡಾ. ಕೋನವಂಸಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next