ಬೆಂಗಳೂರು: ವಿದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾದಿಂದ ರಾಜ್ಯಕ್ಕೂ ಕಂಟಕ ಉಂಟಾಗಬಹುದು ಎಂಬ ಭೀತಿ ದೂರವಾಗಿದ್ದು, ಕಳೆದೊಂದು ತಿಂಗಳಿನಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿಲ್ಲ.
Advertisement
ಕರ್ನಾಟಕ ಸಹಿತ ದೇಶಾದ್ಯಂತ ಇದುವರೆಗೆ ಭೀತಿ ಹುಟ್ಟಿಸುವ ಹಂತದವರೆಗೆ ಕೋವಿಡ್ ಸಂಖ್ಯೆ ಏರಿಕೆಯಾಗಿಲ್ಲ. ಗುರುವಾರ ರಾಜ್ಯದಲ್ಲಿ 37 ಹೊಸ ಕೋವಿಡ್ ಪ್ರಕರಣ ವರದಿಯಾಗಿದ್ದು, ಶೂನ್ಯ ಕೋವಿಡ್ ಮರಣ ದಾಖಲಾಗಿದೆ.
ಬೆಂಗಳೂರಿನಲ್ಲಿ 31, ಕೋಲಾರ 5, ಮೈಸೂರಿನಲ್ಲಿ 1 ಹೊಸ ಕೋವಿಡ್ ಕೇಸ್ ವರದಿಯಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. 25 ಮಂದಿ ಬಿಡುಗಡೆ ಹೊಂದಿದ್ದು, 116 ಪ್ರಕರಣಗಳು ಸಕ್ರಿಯವಾಗಿವೆ.