Advertisement
ಕೋವಿಡ್ ವಾರಿಯರ್ ಸೇವೆ ವೇಳೆಯಲ್ಲಿ ಮೃತಪಟ್ಟರೆ ಅವರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದುಒತ್ತಾಯವಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಅಂತಹ ಘೋಷಣೆ ಆಥವಾ ಕೋವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ ಆಗಿಲ್ಲ. ವೈದ್ಯಕೀಯ ಇಲಾಖೆಯಲ್ಲಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) 275 ರಿಂದ 300 ಮಂದಿಗೆ ಕೋವಿಡ್ ಸೋಂಕು ಹರಡಿದ್ದು, ಅವರಲ್ಲಿ 5 ಮಂದಿ ಸಿಬ್ಬಂದಿ ( ಶುಶ್ರೂಷಕರು, ಆ್ಯಂಬುಲೆನ್ಸ್ ಚಾಲಕರು ಮತ್ತಿತರೆ ಸಿಬ್ಬಂದಿ) ಮೃತಪಟ್ಟಿದ್ದಾರೆ.
Related Articles
Advertisement
ಹಾಸನ: ಜಿಲ್ಲೆಯಲ್ಲಿ ತಿಂಗಳಿನ ಮೊದಲ ವಾರಕ್ಕೆ ಹೋಲಿಸಿದರೆ 2ನೇ ವಾರ ಕೋವಿಡ್ ಪ್ರಕರಣ ಇಳಿಮುಖವಾಗಿವೆ. ಸೋಂಕು ಪರೀಕ್ಷೆಯ ಪ್ರಮಾಣವೂ ಹೆಚ್ಚಿದ್ದು, ಪಾಸಿಟಿವ್ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ. ರಾಜ್ಯದಲ್ಲಿಯೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗಿವೆ. ಕೊರೊನಾದ ಮೊದಲ ಆಲೆ ಮುಗಿಯುತ್ತಾ ಬಂದಿದೆ ಎಂದು ಭಾಸವಾಗುತ್ತಿದೆ. ತಿಂಗಳ ಮೊದಲ ವಾರದವರೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.18 ರಿಂದ 21 ಇತ್ತು. 2ನೇ ವಾರ ಆ ಪ್ರಮಾಣ ಶೇ.7 ರಿಂದ 8 ರಷ್ಟಿದೆ.ಪ್ರತಿದಿನ 3500 ರಿಂದ 4000 ರೂ.ವರೆಗೂ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವ್ ಪ್ರಕರಣ ಇಳಿಮುಖವಾಗಿರುವುದಕ್ಕೆ ಮುಖ್ಯವಾಗಿಜನರಲ್ಲಿ ಜಾಗೃತಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ ಮೊದಲ ವಾರ400 ರಿಂದ500 ಕೋವಿಡ್ ಪಾಸಿಟಿವ್ ಪ್ರಕರಣಗಳುವರದಿಯಾಗುತ್ತಿದ್ದರೆ, 2ನೇ ವಾರ 200 ರಿಂದ 300ರ ಆಸುಪಾಸಿನಲ್ಲಿ ಪಾಸಿಟಿವ್ ಪ್ರಕರಣಗಳುವರದಿಯಾಗುತ್ತಿದ್ದು, ಸಾವಿನ ಪ್ರಮಾಣ ವೂ ಇಳಿಮುಖ ಆಗಿರುವುದು ತುಸು ಸಮಾಧಾನ ತಂದಿದೆ.ನಿನ್ನೆ(ಭಾನುವಾರ) 254 ಪಾಟಿಸಿವ್ ಪ್ರಕರಣಗಳುವರದಿಯಾಗಿದ್ದು, ಎರಡು ಸಾವು ಸಂಭವಿಸಿವೆ. ಹಿಂದಿನವಾರಗಳಲ್ಲಿ ಪ್ರತಿದಿನ 500 ಮೀರಿದ ಪಾಸಿಟಿವ್, ಸಾವಿನಪ್ರಕರಣ 10 ಮೀರಿತ್ತು. ಆದರೆ, ಈ ವಾರ ಇನ್ನೂ ಇಳಿಕೆಯಾಗುವ ಸಂಭವ ಹೆಚ್ಚಿದೆ.
-ನಂಜುಂಡೇಗೌಡ ಎನ್.