Advertisement

ಮತ್ತೂಂದು ಪ್ರದೇಶಕ್ಕೆ ಕೋವಿಡ್ ವೈರಸ್‌ ವಿಸ್ತರಣೆ

04:49 AM May 20, 2020 | Suhan S |

ಬಾಗಲಕೋಟೆ : ಜಿಲ್ಲೆಯಲ್ಲೇ ಮೊದಲ ಕೋವಿಡ್ ಪ್ರಕರಣ ಕಂಡು ಬಂದಿದ್ದ ಬಾಗಲಕೋಟೆಯ ಅಡತ ಬಜಾರ್‌ ಪ್ರದೇಶ ಹೊರತುಪಡಿಸಿ, ನಗರದ ಬೇರೆ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಆ ಪ್ರದೇಶದ 14 ಜನರೂ ಗುಣಮುಖರಾಗಿ ಮನೆ ಸೇರಿದ ಮರುದಿನವೇ ನಗರದ ಮತ್ತೂಂದು ಪ್ರದೇಶಕ್ಕೆ ಸೋಂಕು ವಿಸ್ತರಣೆಯಾಗಿದ್ದು, ಜಯನಗರದ ಜನರು ಭೀತಿಗೊಂಡಿದ್ದಾರೆ.

Advertisement

ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬಂದಿದ್ದ 38 ವರ್ಷದ ಪುರುಷ (ಕಾರ್ಮಿಕ) ಪಿ-1391 ವ್ಯಕ್ತಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಮೂರು ದಿನಗಳ ಹಿಂದೆಯೇ ಮುಚಖಂಡಿ ಕ್ರಾಸ್‌ ಬಳಿಯ ಜಯನಗರದಲ್ಲಿರುವ ತನ್ನ ಮನೆಗೆ ಬಂದಿದ್ದು, ಒಂದು ದಿನ ಮನೆಯಲ್ಲೇ ಕಳೆದಿದ್ದಾನೆ ಎನ್ನಲಾಗಿದೆ. ಜಯನಗರ ಬಡಾವಣೆಯ ಪ್ರಮುಖರು, ಆತನನ್ನು ಕ್ವಾರಂಟೈನ್‌ಗೆ ಕಳುಹಿಸಿದ್ದು, ಮರುದಿನವೇ ಆತನಿಗೆ ಪಾಜಿಟಿವ್‌ ಬಂದಿದೆ. ಹೀಗಾಗಿ ಆತನ ಸಂಪರ್ಕಕ್ಕೆ ಬಂದವರ ವಿವರ ಪಡೆಯುವ ಜತೆಗೆ, ಆತ ಮಹಾರಾಷ್ಟ್ರದಿಂದ ಹೇಗೆ ನಗರಕ್ಕೆ ಬಂದ, ಆತನೊಂದಿಗೆ ಎಷ್ಟು ಜನರಿದ್ದರು, ಕ್ವಾರಂಟೈನ್‌ ವೇಳೆ ಆತನೊಂದಿಗೆ ಸಂಪರ್ಕಕ್ಕೆ ಬಂದವರ ಸ್ಯಾಂಪಲ್‌ ಪಡೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ನಗರದಲ್ಲಿ ಕಂಡು ಬಂದಿದ್ದ ಒಟ್ಟು 15 ಜನ ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು, ಉಳಿದ 14 ಜನರೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದೀಗ ಮತ್ತೂಂದು ಪ್ರದೇಶವಾದ ಜಯನಗರಕ್ಕೆ ಸೋಂಕು ಬಂದಿದ್ದು, ಈ ಬಡಾವಣೆಯ ಜನರು ಕೋವಿಡ್ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೇ ಈ ಬಡಾವಣೆಗೆ ಮಂಗಳವಾರ ರಾತ್ರಿಯಿಂದಲೇ ಪ್ರವೇಶ, ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next