Advertisement

ನಾವು ರಷ್ಯಾಕ್ಕಿಂತ ಫಾಸ್ಟ್‌ !: ಭಾರತ, ಕರ್ನಾಟಕಕ್ಕೆ ಅತಿವೇಗದ ಲಸಿಕೆ ಸರದಾರ ಹೆಗ್ಗಳಿಕೆ

11:52 PM Sep 11, 2021 | Team Udayavani |

ಲಸಿಕೆ ನೀಡಿಕೆಯಲ್ಲಿ ಭಾರತ ಸೂಪರ್‌ ಫಾಸ್ಟ್‌ ಆಗಿ ಸಾಗುತ್ತಿದ್ದು, ಅದರಲ್ಲೂ 5 ರಾಜ್ಯಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳನ್ನು ಹಿಂದಿಕ್ಕಿವೆ. ಈ ಹೆಗ್ಗಳಿಕೆಯಲ್ಲಿ ನಮ್ಮ ಕರ್ನಾಟಕವೂ ಇದೆ ಎನ್ನುವುದು ಇನ್ನೊಂದು ಸಂತಸದ ಸಂಗತಿ. ಅಂದಹಾಗೆ ಭಾರತದ ಪ್ರತಿನಿತ್ಯದ ಲಸಿಕೆ ನೀಡಿಕೆ ಸರಾಸರಿ 68.2 ಲಕ್ಷ!

  • ಉತ್ತರಪ್ರದೇಶ ಪ್ರತಿನಿತ್ಯ ಸರಾಸರಿ73 ಲಕ್ಷ ಡೋಸ್‌ ಲಸಿಕೆ ನೀಡುತ್ತಿದ್ದು, ಇದು ದೇಶದಲ್ಲೇ ಅತ್ಯಂತ ವೇಗದ ವ್ಯಾಕ್ಸಿನೇಶನ್‌. ಉ.ಪ್ರ.ದ ವೇಗದ ಮುಂದೆ “ದೊಡ್ಡಣ್ಣ’ ಅಮೆರಿಕ ಕೂಡ ಮಂಕು. ಅಲ್ಲಿ ನಿತ್ಯದ ಲಸಿಕೆ ನೀಡಿಕೆ ಕೇವಲ 8.07 ಲಕ್ಷ ಡೋಸ್‌!
  • ಗುಜರಾತ್‌ನಲ್ಲಿ ಪ್ರತಿನಿತ್ಯ08 ಲಕ್ಷ ಮಂದಿ ವ್ಯಾಕ್ಸಿನ್‌ ಪಡೆಯುತ್ತಿದ್ದು, ಈ ಪ್ರಮಾಣವು 4.56 ಲಕ್ಷ ನಿತ್ಯದ ಲಸಿಕೆ ವಿತರಣೆ ಹೊಂದಿರುವ ಮೆಕ್ಸಿಕೋಗಿಂತ ಹೆಚ್ಚು.
  • ಕರ್ನಾಟಕದಲ್ಲಿ ಪ್ರತಿನಿತ್ಯ82 ಲಕ್ಷ ಫ‌ಲಾನುಭವಿಗಳಿಗೆ ಲಸಿಕೆ. ರಷ್ಯಾದಲ್ಲಿ ನಿತ್ಯ 3.68 ಲಕ್ಷ ಮಂದಿಗೆ ಲಸಿಕೆ. ರಷ್ಯಾಗಿಂತ ನಾವೇ ಮುಂದು.
  • ಫ್ರಾನ್ಸ್‌ನ ನಿತ್ಯದ ಲಸಿಕೆ ವಿತರಣೆ84 ಲಕ್ಷ; ಮಧ್ಯಪ್ರದೇಶದಲ್ಲಿ ಅದಕ್ಕಿಂತ ಹೆಚ್ಚು. ನಿತ್ಯ 3.71 ಮಂದಿಗೆ ವ್ಯಾಕ್ಸಿನ್‌.
  • ಹರಿಯಾಣದ ನಿತ್ಯದ ವ್ಯಾಕ್ಸಿನೇಶನ್‌ ಸಾಮರ್ಥ್ಯವು (1.52 ಲಕ್ಷ), ಕೆನಡಾ (85 ಸಾವಿರ) ದೇಶಕ್ಕಿಂತ ಅಧಿಕ.
Advertisement

ಲಸಿಕೆ ಪಡೆದವರಲ್ಲಿ “ಹೈಬ್ರಿಡ್‌ ಇಮ್ಯುನಿಟಿ’! :

ಕೋವಿಡ್‌ಗೆ ತುತ್ತಾಗಿ, ಬಳಿಕ ಲಸಿಕೆಯ ಎರಡೂ ಡೋಸ್‌ ಪಡೆದ ಫ‌ಲಾನುಭವಿಗಳಲ್ಲಿ ಕೆಲವರಿಗೆ “ಅತಿಮಾನುಷ ರೋಗ ನಿರೋಧಕ ಶಕ್ತಿ’ ಪತ್ತೆಯಾಗುತ್ತಿರುವುದನ್ನು ವೈದ್ಯವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಮೆರಿಕದ ರಾಕೆಫೆಲ್ಲರ್‌ ವಿವಿಯ ತಜ್ಞರ ತಂಡವು ಫೈಜರ್‌ ಅಥವಾ ಮಾಡೆರ್ನಾದ ಡೋಸ್‌ಗಳನ್ನು ಪಡೆದವರಲ್ಲಿ ಈ ವಿಸ್ಮಯವನ್ನು ಗುರುತಿಸಿದೆ. ಇಂಥವರ ಶರೀರದಲ್ಲಿ ಅಪಾರ ಪ್ರಮಾಣದ ಆ್ಯಂಟಿಬಾಡಿಗಳು ಉತ್ಪಾದನೆಯಾಗಿದ್ದು, ಕೊರೊನಾ ವೈರಸ್‌ನ ವಿವಿಧ ತಳಿಗಳನ್ನು ಎದುರಿಸುವಲ್ಲಿ ಸಫ‌ಲವಾಗುತ್ತಿವೆ. ಈ ಅತಿಮಾನುಷ ಅಥವಾ ಹೈಬ್ರಿàಡ್‌ ಇಮ್ಯುನಿಟಿಯನ್ನು ಅಧ್ಯಯನ ನಡೆಸಿ, ಭವಿಷ್ಯದಲ್ಲಿ ಮತ್ತಷ್ಟು ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳ ತಂಡ ಉತ್ಸುಕವಾಗಿದೆ.

ದೇಶದಲ್ಲಿ 33,376 ಹೊಸ ಕೇಸು : ಶುಕ್ರವಾರದಿಂದ ಶನಿವಾರದ ಅವಧಿಯಲ್ಲಿ 33, 376 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 308 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 3,91,516ಕ್ಕೆ ಏರಿಕೆಯಾಗಿದೆ. ಶುಕ್ರವಾರ ದೇಶದಲ್ಲಿ 15,92,135 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಚೇತರಿಕೆ ಪ್ರಮಾಣ ಶೇ.97.49 ಆಗಿದೆ.

ವ್ಯಾಕ್ಸಿನ್‌ ಪಡೆಯದ ಸಿಬಂದಿಗೆ ಕಡ್ಡಾಯ ರಜೆ:

Advertisement

ಚಂಡೀಗಢ: ಒಂದೂ ವ್ಯಾಕ್ಸಿನ್‌ ಪಡೆಯದ ರಾಜ್ಯ ಸರಕಾರಿ ನೌಕರರಿಗೆ ಸೆ.15ರ ಬಳಿಕ ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲು ಪಂಜಾಬ್‌ ಸಿಎಂ ಕ್ಯಾ| ಅಮರೀಂದರ್‌ ಸಿಂಗ್‌ ಸೂಚಿಸಿದ್ದಾರೆ. “ಮೊದಲ ಡೋಸ್‌ ಪಡೆಯದ ಹೊರತು ಕರ್ತವ್ಯಕ್ಕೆ ಮರಳುವಂತಿಲ್ಲ’ ಎಂದೂ ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಅಲ್ಲಿನ ಶಿಕ್ಷಣ ಸಚಿವರು, ಎರಡೂ ಡೋಸ್‌ ಪಡೆದ ಸಿಬಂದಿಗೆ ಮಾತ್ರವೇ ಶಾಲಾ- ಕಾಲೇಜುಗಳಿಗೆ ಪ್ರವೇಶ ನೀಡುವಂತೆ ಸೂಚಿಸಿದ್ದರು. ಮುಂದಿನ ವರ್ಷ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಅಣಿಯಾಗಿದ್ದು, ಅಷ್ಟರೊಳಗೆ ಎಲ್ಲ ಸರಕಾರಿ ಅಧಿಕಾರಿಗಳು- ಸಿಬಂದಿಗೆ ಸಂಪೂರ್ಣ ವ್ಯಾಕ್ಸಿನ್‌ ನೀಡಲು ಸರಕಾರ ಪಣತೊಟ್ಟಿದೆ. ಏತನ್ಮಧ್ಯೆ, ಕೋವಿಡ್‌ ನಿರ್ಬಂಧಗಳನ್ನು ರಾಜ್ಯ ಸರಕಾರ ಸೆ.15ರಿಂದ 30ರವರೆಗೆ ವಿಸ್ತರಿಸಿದೆ. ಒಳಾಂಗಣ ಶುಭ ಸಮಾರಂಭಗಳಿಗೆ ಜನರ ಮಿತಿಯನ್ನು 150ರಿಂದ 300ಕ್ಕೆ ಹೆಚ್ಚಿಸಲಾಗಿದೆ.

ಲಸಿಕೆ ಪಡೆಯದಿದ್ದಲ್ಲಿ ರಾಜೀನಾಮೆ ನೀಡಿ… :

ಕಡ್ಡಾಯ ಲಸಿಕೆ ಇದೀಗ ಜಗತ್ತಿನ ಮಂತ್ರ. ಒಂದು ಡೋಸ್‌ ಪಡೆಯದಿದ್ದರೆ ಕಡ್ಡಾಯ ರಜೆ ಶಿಕ್ಷೆಯನ್ನು ಪಂಜಾಬ್‌ ಜಾರಿಗೊಳಿಸಿರುವಂತೆ, ಜಗತ್ತಿನ ವಿವಿಧ ರಾಷ್ಟ್ರಗಳೂ ಕಠಿನ ನೀತಿಗಳನ್ನು ರೂಪಿಸಿವೆ.

ರಾಜೀನಾಮೆ ಕೊಡಿ! :

ಇದು ಜಿಂಬಾಬ್ವೆ ಪ್ರಯೋಗಿಸಿದ ಅಸ್ತ್ರ. ಲಸಿಕೆ ಪಡೆಯದ ಸಿಬಂದಿಯಿಂದ ಕಡ್ಡಾಯವಾಗಿ ರಾಜೀನಾಮೆ ಪಡೆಯಲಾಗುತ್ತಿದೆ.

ಪ್ರವೇಶ ನಿಷೇಧ:

ಲಸಿಕೆ ಪಡೆಯದವರು ಆಸ್ಪತ್ರೆ, ಶಾಲೆ ಅಥವಾ ಸಾರ್ವಜನಿಕ ಸಾರಿಗೆಗಳನ್ನು ಪ್ರವೇಶಿಸುವಂತಿಲ್ಲ ಎಂಬುದು ಚೀನದ ಕೆಲವು ಸ್ಥಳೀಯ ಆಡಳಿತಗಳ ರೂಲ್ಸ್‌. ಯುನ್ನಾನ್‌ ಪ್ರಾಂತ್ಯದ ಚುಕ್ಸಿಯಾಂಗ್‌ ಸೇರಿದಂತೆ 20 ಸ್ಥಳೀಯ ಆಡಳಿತಗಳು ಈ ನಿಯಮ ಜಾರಿಗೆ ತಂದಿವೆ.

ಕಚೇರಿಗೆ ಬರಬೇಡಿ:

ಲಸಿಕೆ ಪಡೆಯದ ಉದ್ಯೋಗಿಗಳನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದಂತೆ ಸೌದಿ ಅರೇಬಿಯಾ ಸರಕಾರ ಕಟ್ಟಾ ಜ್ಞೆ ಹೊರಡಿಸಿದೆ.

ವೈದ್ಯರಿಗೇ ನಿರ್ಬಂಧ:

ವ್ಯಾಕ್ಸಿನೇಶನ್‌ ಪಡೆಯದ ವೈದ್ಯರು, ಆರೋಗ್ಯ ಸಿಬಂದಿಯು ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎನ್ನುವುದು ಇಟಲಿಯ ರಾಜಾಜ್ಞೆ.

ಕೆಲಸದಿಂದ ವಜಾ:

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಆಡಳಿತ, ಲಸಿಕೆ ಪಡೆಯದ ಪೌರ ಸಿಬಂದಿಗೆ ದಂಡ ಶುಲ್ಕ ವಿಧಿಸುತ್ತಿದೆ. ಅಲ್ಲದೆ ಕೆಲಸದಿಂದಲೂ ವಜಾಗೊಳಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next