ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ 3ನೇ ಹಂತದ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ 60 ವರ್ಷದ ಮೇಲ್ಪಟ್ಟ ವಯೋ ವೃದ್ಧರೊಬ್ಬರಿಗೆ ಲಸಿಕೆ ಹಾಕಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು, 45 ರಿಂದ 59 ವರ್ಷದ ಒಳಗಿನ ಸಹ ಅಸ್ವಸ್ಥತೆ (ಕೋಮೊರ್ಬಿಡಿಟೀಸ್) ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತದೆ. ನಾಗರಿಕ ಕೇಂದ್ರೀಕತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಗುಂಪಿನವರಲ್ಲಿ, ಮೊದಲನೇ ಮತ್ತು ಎರಡನೇ ಹಂತದ ಲಸಿಕಾ ಕರಣದಲ್ಲಿ ಬಿಟ್ಟು ಹೋದ ಅಥವಾ ಲಸಿಕೆಪಡೆಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಸಹ ಈ ಹಂತದಲ್ಲಿ ಸೂಚಿತ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಪಡೆಯಬಹುದು ಎಂದರು.
ಸರ್ಕಾರಿ 5, ಖಾಸಗಿ ಆಸ್ಪತ್ರೆ 2: ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಕಬಾಡೆ ಮಾತನಾಡಿ, ನಗರದ ಸರಕಾರಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯ ಐದು ಸಾರ್ವಜನಿಕ ಆಸ್ಪತ್ರೆ ಹಾಗೂ ಎರಡು ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ಹಂತದ ಕೋವಿಡ್‌ಲಸಿಕಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ಚಿಕ್ಕಬಳ್ಳಾಪುರದ ನಗರದಲ್ಲಿರುವ ಜಿಲ್ಲಾಸ್ಪತ್ರೆ,ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಮತ್ತು ಶಿಡ್ಲಘಟ್ಟದಲ್ಲಿರುವ ಸಾರ್ವಜನಿಕ ಆಸ್ಪತ್ರೆ, ಗೌರಿಬಿದನೂರಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರದಲ್ಲಿರುವ ಅನನ್ಯ ಸ್ಪೆಷಾಲಿಟಿ ಮತ್ತು ಚಿಂತಾಮಣಿಯಲ್ಲಿರುವ ಡೆಕ್ಕನ್‌ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಮಾರ್ಗಸೂಚಿ ಯಂತೆ ಮೂರನೇ ಹಂತದ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.
ದಾಖಲೆ ಜೊತೆ ಬನ್ನಿ: ಫಲಾನುಭವಿಗಳು ಲಸಿಕಾ ಕೇಂದ್ರಗಳಿಗೆ ಬರುವಾಗ ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಆನ್‌ಲೈನ್‌ನಲ್ಲಿ ನೋಂದಾ ಯಿಸುವಾಗ ಕೇಳುವ ಐಡಿ ಕಾರ್ಡ್, ವಯಸ್ಕರು,ವೈದ್ಯರಿಂದ ಪಡೆದ ದಾಖಲೆ ತರಬೇಕು. ಆರೋಗ್ಯಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ತಮ್ಮ ಎಂಪ್ಲಾಯೆಟ್‌ಸರ್ಟಿಫಿಕೇಟ್, ಅಫೀಷಿಯಲ್ ಐಡೆಂಟಿಟಿ ಕಾರ್ಡ್ ನೊಂದಿಗೆ ಬಂದು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.
100 ರೂ. ಸರ್ವಿಸ್ ಚಾರ್ಜ್: ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‌ಅನ್ನು ರೂ.250ದರದಲ್ಲಿ ನೀಡಲಾಗತ್ತದೆ. ಇದರಲ್ಲಿ ರೂ. 100 ಸರ್ವಿಸ್ ಚಾರ್ಜ್ ಆಗಿರುತ್ತದೆ ಮತ್ತು ರೂ.150ಲಸಿಕೆ ಡೋಸ್‌ನ ದರವಾಗಿರುತ್ತದೆ. ಇದನ್ನುಭಾರತ ಸರ್ಕಾರದ ನಿದಿಷ್ಟ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸದ ದಿನಗಳಲ್ಲಿ ಲಸಿಕೆ ನೀಡಲಾಗುವುದು. ಮಾರ್ಚ್ 1 ರಿಂದ ಮಧ್ಯಾಹ್ನ12 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆಲಸಿಕೆ ನೀಡಲಾಗುವುದು. ಪ್ರತಿ ಲಸಿಕಾ ಕೇಂದ್ರಗಳಲ್ಲಿ200 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಜಿಪಂ ಅಧ್ಯಕ್ಷಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್, ಜಿಲ್ಲಾ ಕ್ಷಯರೋಗನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು,ಚಿಕ್ಕಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿಡಾ.ಮಂಜುಳಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ವೈದ್ಯರಿಂದ ಪ್ರಮಾಣ ಪತ್ರ ಪಡೆದ 45-59 ವರ್ಷದ ಸಹ ಅಸ್ವಸ್ಥತೆ ಹೊಂದಿರುವ ವಯಸ್ಸಿನವರಿಗೆ ಲಸಿಕೆ ನೀಡಲಾಗು ವುದು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ 4 ದಿನಗಳಾದ ಸೋಮವಾರ, ಬುಧವಾರ,ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗುವುದು.
– ಆರ್.ಲತಾ, ಜಿಲ್ಲಾಧಿಕಾರಿ