Advertisement

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

11:57 PM Sep 18, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ಪ್ರಧಾನಿ ಮೋದಿ ಜನ್ಮದಿನದಂದು ದೇಶದಲ್ಲಿ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಪ್ರತೀ ನಿಮಿಷಕ್ಕೆ 26 ಸಾವಿರ ಮಂದಿಯಂತೆ ಲಸಿಕೆ ನೀಡಲಾಗಿದೆ.

Advertisement

ಒಟ್ಟು 2.50 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದ್ದು, ಈ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಲಸಿಕೆ ಮೇಳ ಯಶಸ್ವಿಯಾಗಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಸಾಧನೆಯಿಂದ ನನಗೆ ಇನ್ನೂ ಹೆಚ್ಚು ಕೆಲಸ ಮಾಡಲು ಶಕ್ತಿ ಬಂದಂತಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಜ್ಯದಲ್ಲೂ ದಾಖಲೆ:

ರಾಜ್ಯದಲ್ಲಿ ಶುಕ್ರವಾರ ತಡರಾತ್ರಿಯ ವರೆಗೂ ಲಸಿಕೆ ನೀಡಲಾಗಿದ್ದು, 31.43 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.

Advertisement

ನಗರ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರ ತಡರಾತ್ರಿ 12ರವರೆಗೂ ಲಸಿಕೆ ನೀಡಲಾಗಿದೆ. 12 ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಅತೀ ಹೆಚ್ಚು ಬೆಂಗಳೂರಿನಲ್ಲಿ 5.13 ಲಕ್ಷ ಮಂದಿ, ಬೆಳಗಾವಿಯಲ್ಲಿ 2.74 ಲಕ್ಷ ಮಂದಿ, ದಕ್ಷಿಣಕನ್ನಡದಲ್ಲಿ 1.38 ಲಕ್ಷ, ತುಮಕೂರಿನಲ್ಲಿ 1.35 ಲಕ್ಷ, ಮಂಡ್ಯದಲ್ಲಿ 1.24 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ಮುಂದಿನ ಬುಧವಾರ ಮತ್ತೆ ಲಸಿಕೆ ಮೇಳ ನಡೆಯಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 30 ಲಕ್ಷ ಡೋಸ್‌ ಲಸಿಕೆ ಹಾಕುವ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿ ಎಲ್ಲ ಜಿಲ್ಲಾಧಿಕಾರಿ ಗಳ ಜತೆ ಸಭೆ ನಡೆಸಿ ಲಸಿಕೆ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಗಿತ್ತು. ಪ್ರಧಾನಿ ಮೋದಿ ಅವರ ನಿರಂತರ ಸಹಕಾರದಿಂದ ಗುರಿ ಮುಟ್ಟಲು ಸಾಧ್ಯವಾಗಿದೆ. ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next