Advertisement

ಲಸಿಕೆ ಪಡೆಯದಿದ್ದರೆ ವೇತನರಹಿತ ರಜೆ!

12:43 AM Aug 09, 2021 | Team Udayavani |

ಮಂಗಳೂರು: ಪಿಯು ಕಾಲೇಜು ಉಪ ನ್ಯಾಸಕರು ಮತ್ತು ಸಿಬಂದಿ ಕೊರೊನಾ ಲಸಿಕೆ ಪಡೆಯ ದಿದ್ದರೆ ಅವರಿಗೆ ಸಂಬಳವಿಲ್ಲದೆ ಕಡ್ಡಾಯ ರಜೆ.

Advertisement

… ಇಂತಹ ಸೂಚನೆಯನ್ನು ರಾಜ್ಯದ ಎಲ್ಲ ಸರ ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದೆ. ಲಸಿಕೆ ಪಡೆಯದವರಿಗೆ ಕಾಲೇಜು ಪ್ರವೇಶ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.

ಆ. 23ರಿಂದ ಪಿಯುಸಿ ತರಗತಿ ತೆರೆಯಲು ಸರಕಾರ ಉದ್ದೇಶಿ ಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಮಾಹಿತಿ ನೀಡಿ ದ್ದಾರೆ. ಭೌತಿಕ ತರಗತಿ ಆರಂಭವಾಗುವುದಕ್ಕೆ ಮುನ್ನ ಎಲ್ಲ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶಿಬಿರಗಳನ್ನು ಮಾಡಲಾಗಿದೆ.

ಇದರ ಜತೆಗೆ ಉಪನ್ಯಾಸಕರು, ಬೋಧಕೇತರ ಸಿಬಂದಿ, ಆಡಳಿತಾತ್ಮಕ ಸಿಬಂದಿಗಳಿಗೂ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದಿದ್ದರೆ ಅಂಥವರಿಗೆ ಸಂಬಳ ರಹಿತ ಕಡ್ಡಾಯ ರಜೆ ನೀಡಲಾಗುತ್ತದೆ ಎಂದು ಇಲಾಖೆಯು ಎಲ್ಲ ಜಿಲ್ಲೆಗಳ ಪಿಯು ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಕನಿಷ್ಠ 1 ಡೋಸ್‌ ಅಗತ್ಯ :

Advertisement

ಕಾಲೇಜಿಗೆ ಹಾಜರಾಗುವ ಉಪನ್ಯಾಸಕರು, ಸಿಬಂದಿ 2 ಡೋಸ್‌ ಲಸಿಕೆ ಪಡೆದಿರಬೇಕು. ಕನಿಷ್ಠ 1 ಡೋಸ್‌ ಲಸಿಕೆಯನ್ನಾದರೂ ಪಡೆದಿರಲೇಬೇಕು. ಇದು ಖಾಸಗಿ ಅನುದಾನ ರಹಿತ ಪಿಯು ಕಾಲೇಜಿನವರಿಗೂ ಅನ್ವಯ. ಸಂಬಳ ಕಡಿತ ನಿಯಮ ಮಾತ್ರ ಇವರಿಗೆ ಅನ್ವಯಿಸುವುದಿಲ್ಲ.

ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ಉಪನ್ಯಾಸಕರು-ಸಿಬಂದಿಗೆ ಲಸಿಕೆ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇನ್ನೂ ಇದೆ ಅವಕಾಶ! :

ಸರಕಾರಿ, ಅನುದಾನಿತ ಕಾಲೇಜಿನ ಉಪನ್ಯಾಸಕರು, ಸಿಬಂದಿ ಲಸಿಕೆ ಪಡೆಯದಿದ್ದರೆ ಆಯಾ ಜಿಲ್ಲಾಧಿ ಕಾರಿಗಳ ಗಮನಕ್ಕೆ ತಂದು ವಿಶೇಷ ಲಸಿಕೆ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ.

ಪಿಯು ಕಾಲೇಜುಗಳ ಸಂಖ್ಯೆ :

ದಕ್ಷಿಣ ಕನ್ನಡ ಉಡುಪಿ

ಒಟ್ಟು ಕಾಲೇಜು           210         105

ಸರಕಾರಿ             53           42

ಅನುದಾನಿತ   42           18

ಉಪನ್ಯಾಸಕರು, ಸಿಬಂದಿ          ಸುಮಾರು 1,000              ಸುಮಾರು 600

ಪಿಯು ಕಾಲೇಜು ಭೌತಿಕ ತರಗತಿ ಆರಂಭವಾಗುವಾಗ ಎಲ್ಲ ಉಪ ನ್ಯಾಸಕರು, ಸಿಬಂದಿ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ. ಲಸಿಕೆ ಪಡೆಯದ ಸರಕಾರಿ, ಅನುದಾನಿತ ಕಾಲೇಜಿನ ಉಪನ್ಯಾಸಕರು, ಸಿಬಂದಿಗೆ ಕಡ್ಡಾಯ ರಜೆ ನೀಡಲಾಗುವುದು ಮತ್ತು ಆ ಅವಧಿಯ ವೇತನ ಕಡಿತ ಮಾಡಲಾಗುವುದು. ಸ್ನೇಹಲ್‌ ಆರ್‌., ನಿರ್ದೇಶಕರು,ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು.

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next