Advertisement
ಜನವರಿಯಲ್ಲಿ ಕೊರೊನಾ ವ್ಯಾಕ್ಸಿನೇಶನ್ ಅನ್ನು ಪರಿಚಯಿಸಿದಾಗಿನಿಂದ ನವಿಮುಂಬಯಿ ಮಹಾನಗರ ಪಾಲಿಕೆ ಆಡಳಿತವು ಸರಿಯಾದ ಯೋಜನೆಗಳೊಂದಿಗೆ ಸಾಧ್ಯವಾದಷ್ಟು ನಾಗರಿಕರಿಗೆ ಲಸಿಕೆ ಹಾಕುವ ಪ್ರಯತ್ನಗಳನ್ನು ಮಾಡುತ್ತಿದೆ. ಸರಕಾರದಿಂದ ಲಭ್ಯವಿರುವ ಲಸಿಕೆಗಳ ದಾಸ್ತಾನು ಪ್ರಕಾರ ನಗರದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ಲಸಿಕೆಗಳು ಲಭ್ಯವಿಲ್ಲದ ಕಾರಣ ವ್ಯಾಕ್ಸಿನೇಶನ್ ಕೇಂದ್ರಗಳನ್ನು ಮುಚ್ಚಬೇಕಾಗಿದೆ. ಈ ವರೆಗೆ ಒಟ್ಟು 8,11,159 ಮಂದಿಗೆ ಮೊದಲ ಎರಡನೇ ಡೋಸ್ ಲಸಿಕೆ ನೀಡಿದೆ.
Related Articles
Advertisement
ಹಾಸಿಗೆ ಹಿಡಿದಿರುವ ನಾಗರಿಕರಿಗೆ ಮನಪಾ ಸಹಾಯವಾಣಿ ಮೂಲಕ ತಿಳಿಸಲಾಗುವುದು. ಹಾಸಿಗೆ ಹಿಡಿದವರಿಗೆ ಅವರ ಸಂಬಂಧಪಟ್ಟ ವೈದ್ಯರು ದಾಖಲೆಗಳಿಂದ ದೃಢೀಕರಣ ನೀಡಿದ ಬಳಿಕ ಅಂತಹ ವ್ಯಕ್ತಿಗಳಿಗೆ ತಮ್ಮ ಮನೆಗಳಲ್ಲಿ ಲಸಿಕೆ ನೀಡಲಾಗುವುದು. ಅಂತಹ ರೋಗಿಗಳಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು 23 ಆಯಾಯಾ ನಾಗರಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗಿದೆ. ಲಸಿಕೆ ವ್ಯರ್ಥವಾಗದಂತೆ ಮಧ್ಯಾಹ್ನ ಲಸಿಕೆ ಹಾಕಲು ನಿರ್ಧರಿಸಲಾಗಿದೆ.
ಗುರುವಾರ ಮಾತ್ರ ಕೋವ್ಯಾಕ್ಸಿನ್ ಲಸಿಕೆ ಲಭ್ಯ:
ಸರಕಾರದಿಂದ ಲಸಿಕೆಗಳನ್ನು ಪಡೆಯದ ಕಾರಣ ನಾಗರಿಕರು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ ವಾರ 8,000 ಕೋವಿಡ್ ಲಸಿಕೆಗಳನ್ನು ಪಡೆಯಲಾಗಿದೆ. ಅದರಲ್ಲಿ 4,350 ಕೊವಿಶೀಲ್ಡ್ ಮತ್ತು 250 ಕೋವ್ಯಾಕ್ಸಿನ್ ಒಳಗೊಂಡಿದೆ. ಮನಪಾಗೆ ಇನ್ನೂ ಹೆಚ್ಚಿನ ಪ್ರಮಾಣದ ಲಸಿಕೆ ಬಂದಿಲ್ಲ. ಆದ್ದರಿಂದ ಮನಪಾದ ವಾಶಿ, ನೆರುಲ್ ಮತ್ತು ಐರೋಲಿ ಆಸ್ಪತ್ರೆಗಳಲ್ಲಿ ಗುರುವಾರ ಮಾತ್ರ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು.
ಮನಪಾ ಸಿದ್ಧತೆ :
ನಗರದಲ್ಲಿ ಹಾಸಿಗೆ ಹಿಡಿದವರಿಗೆ ಮನೆ-ಮನೆ ಲಸಿಕೆ ಅಭಿಯಾನ ನಡೆಸಲು ಮನಪಾ ಸಿದ್ಧತೆ ನಡೆಸಿದೆ. ಸರಕಾರದ ಮಾರ್ಗಸೂಚಿಗಳ ಪ್ರಕಾರ ಈ ಅಭಿಯಾನವನ್ನು ಜಾರಿಗೆ ತರಲಾಗುವುದು. ಮನಪಾ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. – ಅಭಿಜೀತ್ ಬಂಗಾರ್,ಆಯುಕ್ತರು, ನವಿಮುಂಬಯಿ ಮನಪಾ