ಹುಬ್ಬಳ್ಳಿ: ದೇಶಾದ್ಯಂತ ಜೂ. 21ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಅಂದು ಸುಮಾರು 25 ಸಾವಿರ ಜನರಿಗೆ ಲಸಿಕೆ ಕೊಡುವ ಗುರಿ ಹೊಂದಲಾಗಿದೆ. ಕಿಮ್ಸ್ ಆಸ್ಪತ್ರೆಯೊಂದರಲ್ಲೇ 3 ಸಾವಿರ ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ತಿಳಿಸಿದರು.
ಶನಿವಾರ ಕಿಮ್ಸ್‌ನ ಕೊವ್ಯಾಕ್ಸಿನ್ ಕೇಂದ್ರಕ್ಕೆ ಭೇಟಿಕೊಟ್ಟು ನಂತರ ನಿರ್ದೇಶಕರು ಮತ್ತು ವೈದ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್‌ಉಚಿತ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜೂ. 21ರಂದು ಚಾಲನೆ ನೀಡಲಿದ್ದಾರೆ.ಅಂದು ದೇಶಾದ್ಯಂತ 10 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಅವರು ವಿಪ ಸದಸ್ಯ ಪ್ರದೀಪ ಶೆಟ್ಟರ ಅವರಿಗೆಮಾಹಿತಿ ನೀಡಿ, ಕಿಮ್ಸ್‌ನಲ್ಲಿ ಇದುವರೆಗೆ 45 ಸಾವಿರ ಜನರಿಗೆ ಕೋವಿಡ್ ಲಸಿಕೆನೀಡಲಾಗಿದೆ. ಜಿಲ್ಲೆಯ ಅಂದಾಜು 20 ಲಕ್ಷ ಜನರಲ್ಲಿ ಶೇ.20 ಜನರು ಲಸಿಕೆ ಪಡೆದಿದ್ದಾರೆ. ಕೊರೊನಾರೋಗಿಗಳ ಚಿಕಿತ್ಸೆಗಾಗಿ 1 ಸಾವಿರಬೆಡ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಜೊತೆಗೆ ಹೆಚ್ಚುವರಿಯಾಗಿ 200ಬೆಡ್ ಸಿದ್ಧಪಡಿಸಲಾಗಿತ್ತು. ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಡ್‌ಗಳವ್ಯವಸ್ಥೆಯಾಗಿದೆ. ಸದ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 170 ರೋಗಿಗಳಿದ್ದು, 130 ಸಾರಿ ರೋಗಿಗಳು, 125 ಇತರೆ ರೋಗಿಗಳು ಇದ್ದಾರೆ. ಕೊರೊನಾಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. 600 ಬೆಡ್‌ಗಳು ಖಾಲಿ ಇವೆ. ಶೀಘ್ರವೇ ಕೋವಿಡ್ ಹೊರತುಪಡಿಸಿದ ರೋಗಿಗಳ ಚಿಕಿತ್ಸೆಆರಂಭಿಸಲಾಗುವುದು. 135 ಕಪ್ಪು ಶಿಲೀಂಧ್ರ ಹೊಂದಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವ್ಯಾಬ್ ತಪಾಸಣೆಗೆ ಹೊರ ಜಿಲ್ಲೆಯಿಂದಲೂ ಮಾದರಿಗಳು ಬರುತ್ತಿವೆ ಎಂದು ವಿವರಿಸಿದರು.
ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ., ಉಪ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಪ್ರಾಂಶುಪಾಲ ಈಶ್ವರ ಹೊಸಮನಿ, ವ್ಯಾಕ್ಸಿನ್ ನೋಡಲ್ ಅಧಿಕಾರಿ ಡಾ| ಲಕ್ಷ್ಮೀಕಾಂತ ಲೋಕರೆ, ಬಿಜೆಪಿಮುಖಂಡರಾದ ಮಲ್ಲಿಕಾರ್ಜುನಸಾವುಕಾರ, ಸಂತೋಷ ಚವ್ಹಾಣ, ರವಿ ನಾಯ್ಕ ಮೊದಲಾದವರಿದ್ದರು.
ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ನಿಯುಕ್ತಿ :
ಕಿಮ್ಸ್‌ನಲ್ಲಿ ಈಗಾಗಲೇ ಪ್ರತಿದಿನ 1000-1200 ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜೂ. 21ರಿಂದ 18 ವರ್ಷ ಮೇಲ್ಪಟ್ಟರಿಗೆ ಬೃಹತ್ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಕೊವ್ಯಾಕ್ಸಿನ್ ಕೇಂದ್ರದಲ್ಲಿ 4-5 ಬೂತ್ ಸೇರಿದಂತೆ ಮೇಕ್ ಇನ್ ಶಿಫ್ಟ್‌ನಲ್ಲಿ ಮೂರು ಬೂತ್ ಮಾಡಲಾಗುತ್ತಿದೆ. ಕಿಮ್ಸ್‌ನಲ್ಲಿಅಂದು 2 ಸಾವಿರಕ್ಕೂ ಹೆಚ್ಚು ಜನ ಲಸಿಕೆ ಪಡೆಯಬಹುದೆಂದುಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 20-22 ಸಾವಿರ ಗುರಿ ಇದೆ.ಅಂದು ಕೊವ್ಯಾಕ್ಸಿನ್ 1 ಮತ್ತು 2ನೇ ಡೋಸ್ ಸಹ ನೀಡಲಾಗುವುದು. ಸಾರ್ವಜನಿಕರು ಲಭ್ಯವಿದ್ದ ಲಸಿಕೆ ಪಡೆಯಬೇಕು. ಲಸಿಕೆ ನೀಡಲು ಈಗಿರುವ ತಂಡವನ್ನು ದುಪ್ಪಟ್ಟು ಮಾಡಲಾಗುವುದು. ವೈದ್ಯರು, ಸ್ಟಾಫ್ ನರ್ಸ್, ಗುತ್ತಿಗೆ ಕೆಲಸಗಾರರು, ನೋಡಲ್ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲಾ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಹೇಳಿದರು