Advertisement

ತಾಲೂಕಿನಲ್ಲಿ ಕೇವಲ 8 ಸಾವಿರ ಮಂದಿಗೆ ಕೋವಿಡ್ ಲಸಿಕೆ

03:44 PM Apr 27, 2021 | Team Udayavani |

ಬಂಗಾರಪೇಟೆ: ಕೋವಿಡ್ ಸೋಂಕು ಹೆಚ್ಚುತ್ತಿದ್ದರೂ ತಾಲೂಕಿನಲ್ಲಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂಕೇವಲ 8 ಸಾವಿರ ಮಂದಿ ಮಾತ್ರ ಲಸಿಕೆ ಹಾಕಿಕೊಂಡಿದ್ದು, ಅಧಿಕಾರಿಗಳು ಮನವೊಲಿಸಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಸೂಚಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ತೀರಾ ಕಡಿಮೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಉಚಿತ ಲಸಿಕೆ ಪೂರೈಕೆ ಮಾಡುತ್ತಿದ್ದರೂ ಏಕೆ ಹಾಕಿಸಿಕೊಳ್ಳುತ್ತಿಲ್ಲಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ. ತಾಲೂಕಿನ ಪ್ರತಿಗ್ರಾಮದಲ್ಲಿಯೂ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಅಧಿಕಾರಿಗಳಿಗೆ ತಿಳಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚಳ: ತಾಲೂಕಿನ ಆಸ್ಪತ್ರೆಯಲ್ಲಿ ಆಕ್ಸಿಜನ್‌, ಅಧಿಕಾರಿಗಳು, ಸಿಬ್ಬಂದಿ, ಲಸಿಕೆ ಕೊರತೆ ಇಲ್ಲ. ಹೀಗಾಗಿ ಜನರು ಆತಂಕ ಬಿಟ್ಟು ಲಸಿಕೆ ಪಡೆಯಬೇಕಿದೆ. ತಾಲೂಕಿನ ಜನರಲ್ಲಿ ಮೊದಲಿ ನಂತೆ ಈಗ ಕೊರೊನಾ ಬಗ್ಗೆ ಭಯವೇ ಇಲ್ಲ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿಬೆಂಗಳೂರಿನ ನಂತರ ಸ್ಥಾನಕ್ಕೆ ಜಿಗಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

300 ಬೆಡ್‌ಗಳ ವ್ಯವಸ್ಥೆ ಮಾಡಿ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಹೆಚ್ಚಿದೆ. ಎಲ್ಲೆಲ್ಲಿಖಾಲಿ ಸ್ಥಾನಗಳಿವೆಯೋ ಅಂತಹ ಆಸ್ಪತ್ರೆಗಳಲ್ಲಿಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಜಿಲ್ಲಾಡಳಿತಕ್ರಮಕೈಗೊಳ್ಳಬೇಕು. ಪಟ್ಟಣದ ಶ್ಯಾಮ್‌ ಆಸ್ಪತ್ರೆ, ಯಳೇಸಂದ್ರದ ಮೊರಾರ್ಜಿ ವಸತಿ ಶಾಲೆಯಲ್ಲಿ ಈಗಾಗಲೇ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಸಿದ್ಧತೆ ನಡೆಸಲಾಗಿದೆ. ಅದರಂತೆ ಕೆಜಿಎಫ್ ಮೈನಿಂಗ್‌ ಆಸ್ಪತ್ರೆ, ಜನರಲ್‌ ಆಸ್ಪತ್ರೆಯಲ್ಲಿ ಕನಿಷ್ಠ300 ಬೆಡ್‌ಗಳ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಕೋವಿಡ್ಸೋಂಕು ಹರಡುವುದನ್ನು ತಡೆಗಟ್ಟಲುಸಹಕರಿಸಬೇಕು. ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

Advertisement

ಆಸ್ಪತ್ರೆಗೆ ಭೇಟಿ: ಸಭೆ ಮುಗಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಆಕ್ಸಿಜನ್‌, ಬೆಡ್‌, ಔಷಧಿ, ಮತ್ತಿತರಕೊರತೆಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಜೊತೆ ಚರ್ಚೆ ಮಾಡಿದರು. ನಗರ, ಗಡಿ ಭಾಗಗಳಲ್ಲಿ ಕೋವಿಡ್ ಬಗ್ಗೆ ಮುಂಜಾಗ್ರತೆ ವಹಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಸಿ, ತಾಲೂಕು ನೋಡಲ್‌ ಅಧಿಕಾರಿ ವಿ.ಸೋಮಶೇಖರ್‌, ತಹಶೀಲ್ದಾರ್‌ ಎಂ.ದಯಾನಂದ್‌, ತಾಪಂ ಇಒ ಎನ್‌.ವೆಂಕಟೇಶಪ್ಪ,ಡಿವೈಎಸ್‌ಪಿ ಉಮೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ಬಿ.ಸುನೀಲ್‌ಕುಮಾರ್‌, ಸಬ್‌ಇನ್ಸ್‌ಪೆಕ್ಟರ್‌ ಆರ್‌.ಜಗದೀಶರೆಡ್ಡಿ, ತಾಲೂಕು ಆರೋಗ್ಯಾಧಿಕಾರಿಡಾ.ಸರಸ್ವತಿ, ಎಎನ್‌ಎಂ ಡಾ. ಪುಣ್ಯಮೂರ್ತಿ,ಕೃಷಿ ಸಹಾಯಕ ನಿರ್ದೇಶಕ ಅಸೀಪುಲ್ಲಾ,ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ,ಸಿಡಿಪಿಒ ರಮ್ಯಾ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next