Advertisement
ಆನ್‌ಲೈನ್ ನೋಂದಣಿ ಹೇಗೆ? :
- ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿ, ಡ್ಯಾಶ್‌ಬೋರ್ಡ್‌ನಲ್ಲಿ “ಕೋವಿನ್’ ಆಯ್ಕೆ ಮಾಡಿ. ಬಳಿಕ “ವ್ಯಾಕ್ಸಿನೇಷನ್’ ಆಯ್ಕೆ ಮಾಡಿ “ರಿಜಿಸ್ಟರ್ ನೌ’ನಲ್ಲಿ ನೋಂದಣಿ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ನಮೂದಿಸಿ.
- 2ನೇ ಹಂತದಲ್ಲಿ ಪಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಅಥವಾ ಕೇಳಿರುವ ದಾಖಲೆ ಆಯ್ಕೆ ಮಾಡಬೇಕು.
- ಲಿಂಗ, ಜನ್ಮ ದಿನಾಂಕ ಟೈಪ್ ಮಾಡಿ.
- ಅನಂತರ ಬರುವ ಹೊಸ ಪೇಜ್‌ನಲ್ಲಿ ನಾಲ್ಕು ಹೆಸರುಗಳನ್ನು ಮೊಬೈಲ್ ಸಂಖ್ಯೆ ಸಹಿತ ಸೇರಿಸಲು ಅವಕಾಶ ಇರುತ್ತದೆ. ಸಮೀಪದ ಲಸಿಕೆ ಕೇಂದ್ರ, ದಿನಾಂಕ, ಸಮಯ ಆಯ್ಕೆ ಮಾಡಿ.
- ಕೋವಿನ್ ವೆಬ್‌ಸೈಟ್‌ನಲ್ಲಿ (cowin.gov.in ) ಮೇಲಿನಂತೆಯೇ ನೋಂದಣಿ ಪ್ರಕ್ರಿಯೆ ಅನುಸರಿಸಿ.