Advertisement
ಡಿಸಿ ಕಚೇರಿ ಸಭಾಂಗಣದಲ್ಲಿ 3ನೇ ಹಂತದ ಲಸಿಕೆ ನೀಡುತ್ತಿರುವ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 1.30 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.7.8 ರಷ್ಟು ಹಿರಿಯ ನಾಗರಿಕರು ಇದ್ದಾರೆ ಎಂದರು.
Related Articles
Advertisement
ನಾಗರಿಕರು ತಾವಾಗಿಯೇ ಕೋವಿನ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಕೊಂಡುತಮಗೆ ಅನುಕೂಲವಿರುವ ಲಸಿಕಾ ಕೇಂದ್ರದಲ್ಲಿಲಸಿಕೆ ಪಡೆಯಬಹುದು. ಅಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಲು ಅವಕಾಶವಿದೆ. ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವಾಗ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್ ಅಥವಾಯಾವುದಾದರೊಂದು ಫೋಟೋ ಇರುವ ಐ.ಡಿಕಾರ್ಡ್‌ನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರದ್ ನಾಯಕ, ಆರ್ ಸಿಎಚ್ ಡಾ| ರಮೇಶ್ ರಾವ್ ಹಾಜರಿದ್ದರು.
ಖಾಸಗಿ ಆಸ್ಪತ್ರೆ ಗಳಲ್ಲಿ 250 ರೂ. ಮಾತ್ರ ನೀಡಿ :
ಜಿಲ್ಲೆಯಲ್ಲಿ ಲಸಿಕೆ ವಿತರಿಸಲು ಕೆಲವು ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ ವ್ಯಾಕ್ಸಿನೆಷನ್ ಸೆಂಟರ್ ಮಾಡಲಾಗುತ್ತಿದೆ. ಇದಕ್ಕಾಗಿ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆ, ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್ ಹಾಗೂ ಹೈಟೇಕ್ ಲೈಫ್ ಲೈನ್ ಆಸ್ಪತ್ರೆ, ಕಾರವಾರದ ಅರ್ಥ್ ಮೆಡಿಕಲ್ ಸೆಂಟರ್‌ನವರುಲಸಿಕೆ ನೀಡಲು ಮುಂದೆ ಬಂದಿವೆ. ಸಾರ್ವಜನಿಕರು ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಗುರುತಿಸಲಾಗಿರುವ ಈ ಮೇಲಿನ ಐದು ಖಾಸಗಿ ಆಸ್ಪತ್ರೆಯಲ್ಲಿ 250 ರೂ ಹಣ ನೀಡಿ ಲಸಿಕೆಪಡೆದುಕೊಳ್ಳಬಹುದು ಎಂದರು. ಲಸಿಕೆಯ ಮೊತ್ತ 150 ರೂ.ಮಾತ್ರ. ಖಾಸಗಿ ಆಸ್ಪತ್ರೆಯಲ್ಲಿ ಇಂಜಕ್ಷನ್‌ನೀಡಿದ್ದಕ್ಕೆ ಸರ್ವೀಸ್ ಚಾರ್ಜ ಆಗಿ 100 ರೂ.ಪಡೆಯಬಹುದು. ಅಥವಾ ಅವರು ಸಹ ಉಚಿತವಾಗಿ ಕೇವಲಕೋವಿಶೀಲ್ಡ್ ಡೋಜ್ ಮೊತ್ತ 150 ರೂ. ಮಾತ್ರ ಪಡೆಯಬಹುದು. ಅದು ಅವರಿಗೆ ಬಿಟ್ಟದ್ದು, ಆದರೆ ಸರ್ವೀಸ್ ಚಾರ್ಜ್ ಎಂದು 100 ರೂ. ಪಡೆಯಬಹುದು. ಲಸಿಕೆ ಪಡೆಯುವವರು 250 ರೂ.ಗಳಿಗಿಂತ ಹೆಚ್ಚಿನ ಮೊತ್ತ ನೀಡಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.