Advertisement

ಲಸಿಕೆ ಅಭಿಯಾನಕ್ಕೆ 6 ತಿಂಗಳು : 2ನೇ ಡೋಸ್‌ಗೆ ಹೆಚ್ಚಿದ ಬೇಡಿಕೆ

01:06 AM Jul 19, 2021 | Team Udayavani |

ಬೆಂಗಳೂರು : ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ 6 ತಿಂಗಳುಗಳು ಪೂರ್ಣಗೊಂಡಿದ್ದು, ಶೇ. 10ರಷ್ಟು ಮಂದಿಗೆ ಮಾತ್ರ 2 ಡೋಸ್‌ಗಳು ಸಿಕ್ಕಿವೆ.

Advertisement

ಲಸಿಕೆ ವಿತರಣೆಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಶೇ. 44ರಷ್ಟು ಮಂದಿ ಮೊದಲ ಡೋಸ್‌ ಪಡೆದರೆ, 2ನೇ ಡೋಸ್‌ ಪಡೆದವರು 10ರಲ್ಲಿ ಒಬ್ಬರು ಮಾತ್ರ. ಕಳೆದ 6 ತಿಂಗಳುಗಳಲ್ಲಿ 2,73,18,929 ಡೋಸ್‌ ಲಸಿಕೆ ನೀಡಲಾಗಿದೆ. 2,20,14,919 ಮಂದಿ ಮೊದಲ ಡೋಸ್‌ ಮತ್ತು 53,04,010 ಮಂದಿ ಎರಡೂ ಡೋಸ್‌ ಪಡೆದಿದ್ದಾರೆ.

45 ವರ್ಷ ಮೇಲ್ಪಟ್ಟ 1.15 ಕೋಟಿ, 18-44 ವರ್ಷದ 88 ಲಕ್ಷ ಮಂದಿ, 7.5 ಲಕ್ಷ ಆರೋಗ್ಯ ಕಾರ್ಯಕರ್ತರು, 9 ಲಕ್ಷ ಮುಂಚೂಣಿ ಕಾರ್ಯಕರ್ತರು ಸೇರಿ ಈವರೆಗೆ 2.2 ಕೋಟಿ ಜನ ಲಸಿಕೆ ಪಡೆದಿದ್ದಾರೆ.

ಪೂರೈಕೆ ಹೆಚ್ಚಾದರೆ ಉತ್ತಮ
ರಾಜ್ಯಕ್ಕೆ ಮೊದಲ ಮತ್ತು 2ನೇ ಡೋಸ್‌ ಸೇರಿ ಒಟ್ಟು 9.9 ಕೋಟಿ ಡೋಸ್‌ ಲಸಿಕೆ ಬೇಕಿದೆ. ಹೆಚ್ಚು ಪೂರೈಕೆಯಾದರೆ ನಿತ್ಯ 10 ಲಕ್ಷ ಮಂದಿಗೆ ಲಸಿಕೆ ನೀಡುವ ಮೂಲಕ ಆಗಸ್ಟ್‌ ಅಂತ್ಯದೊಳಗೆ ಎಲ್ಲರಿಗೂ ಮೊದಲ ಡೋಸ್‌, ಅಕ್ಟೋಬರ್‌ ಒಳಗೆ ಎರಡನೇ ಡೋಸ್‌ ಪೂರ್ಣಗೊಳಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

2ನೇ ಡೋಸ್‌ಗೆ ಹೆಚ್ಚಿದ ಬೇಡಿಕೆ
ರಾಜ್ಯದಲ್ಲಿ ದಾಸ್ತಾನು ಕೊರತೆಯಿಂದ 2ನೇ ಡೋಸ್‌ ಪಡೆಯುವವರಿಗೂ ಸಕಾಲದಲ್ಲಿ ಲಸಿಕೆ ಸಿಗದಂತಾಗಿದೆ. ಶೇ. 88ರಷ್ಟು ಕೊವಿಶೀಲ್ಡ್‌ ಲಸಿಕೆ ನೀಡಲಾಗಿದೆ. ಇದರ ಮೊದಲ ಡೋಸ್‌ ಪಡೆದವರು 84 ದಿನಗಳ ಬಳಿಕ 2ನೇ ಡೋಸ್‌ ಪಡೆಯಬೇಕು. ಎಪ್ರಿಲ್‌ ಕೊನೆಯ 2 ವಾರ 25 ಲಕ್ಷ ಮಂದಿ ಕೊವಿಶೀಲ್ಡ್‌ ಮೊದಲ ಡೋಸ್‌ ಪಡೆದಿದ್ದು, ಈಗ 2ನೇ ಡೋಸ್‌ ಪಡೆಯಬೇಕಿತ್ತು. ಈ ಪೈಕಿ ಅರ್ಧದಷ್ಟು ಜನರಿಗೆ ಲಸಿಕೆ ಸಿಕ್ಕಿಲ್ಲ. ಮೇ ತಿಂಗಳ ಮೊದಲ 2 ವಾರಗಳಲ್ಲಿ ಲಸಿಕೆ ಪಡೆದ 25 ಲಕ್ಷ ಮಂದಿಗೆ ಮುಂದಿನ ತಿಂಗಳು 2ನೇ ಡೋಸ್‌ ನೀಡಬೇಕಿದೆ. ಹೀಗಾಗಿ ರಾಜ್ಯಕ್ಕೆ 2ನೇ ಡೋಸ್‌ಗೆಂದು ಅರ್ಧಕೋಟಿ ಲಸಿಕೆಯ ಆವಶ್ಯಕತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next