Advertisement
ಮಂಗಳೂರಿನಲ್ಲಿ 45ರಿಂದ 59 ವರ್ಷ ದೊಳಗಿನ ಶೇ. 26.81ರಷ್ಟು ಮಂದಿ ಮೊದಲನೇ ಡೋಸ್, ಶೇ. 17.27ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಅದೇರೀತಿ, 60 ವರ್ಷ ಮೇಲ್ಪಟ್ಟ ಶೇ. 61.15ರಷ್ಟು ಮಂದಿ ಮೊದಲನೇ ಡೋಸ್, ಶೇ. 46.12ರಷ್ಟ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪುತ್ತೂರು ತಾಲೂಕು ಇದ್ದು, ಇಲ್ಲಿನ 45-59 ವರ್ಷದೊಳಗಿನ ಶೇ. 29.26ರಷ್ಟು ಮಂದಿ ಮೊದಲ ಡೋಸ್, ಶೇ.14.01ರಷ್ಟು ಮಂದಿ 2ನೇ ಡೋಸ್, 60 ವರ್ಷ ಮೇಲ್ಪಟ್ಟ ಶೇ. 63.74ರಷ್ಟು ಮಂದಿ ಮೊದಲ ಡೋಸ್ ಮತ್ತು ಶೇ. 36ರಷ್ಟು 2ನೇ ಡೋಸ್ ಲಸಿಕೆ ಪ್ರಗತಿ ಕಂಡಿದೆ.
Related Articles
Advertisement
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಅದರಲ್ಲಿಯೂ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಅಭಿಯಾನ ಆರಂಭಗೊಂಡಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
ಕೊವಿಶೀಲ್ಡ್ ವಿತರಣೆಯೇ ಹೆಚ್ಚು :
ಜಿಲ್ಲೆಯಲ್ಲಿ ಕೊವ್ಯಾಕ್ಸಿನ್‌ಗೆ ಹೋಲಿಕೆ ಮಾಡಿದರೆ ಕೊವಿಶೀಲ್ಡ್ ಲಸಿಕೆ ಪಡೆದವರೇ ಹೆಚ್ಚಿನ ಮಂದಿ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನದ ಮೊದಲ ಕೆಲವು ತಿಂಗಳು ಮಾತ್ರ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿತ್ತು. ಬಳಿಕ ಹೆಚ್ಚಾಗಿ ಕೊವಿಶೀಲ್ಡ್ ಲಸಿಕೆಯೇ ಸರಬರಾಜು ಆಗುತ್ತಿತ್ತು. ಪರಿಣಾಮ ಈ ಲಸಿಕೆ ಫಲಾನುಭವಿಗಳೇ ಹೆಚ್ಚಿನ ಮಂದಿ ಇದ್ದಾರೆ. ಜಿಲ್ಲೆಯಲ್ಲಿ ಈವರೆಗೆ 45ರಿಂದ 59 ವರ್ಷದೊಳಗಿನ 99,351 ಮಂದಿ ಕೊವಿಶೀಲ್ಡ್ ಮೊದಲ ಡೋಸ್ ಮತ್ತು 14,105 ಮಂದಿ ಎರಡನೇ ಡೋಸ್ ಮತ್ತು 60 ವರ್ಷ ಮೇಲ್ಪಟ್ಟ 1,01,112 ಮಂದಿ ಮೊದಲ ಡೋಸ್ ಮತ್ತು 41,338 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನ 15,400 ಮಂದಿ ಕೊವ್ಯಾಕ್ಸಿನ್ ಮೊದಲ ಡೋಸ್, 4,727 ಮಂದಿ ಎರಡನೇ ಡೋಸ್, 60 ವರ್ಷ ಮೇಲ್ಪಟ್ಟ 18,196 ಮಂದಿ ಮೊದಲ ಡೋಸ್ 8,741 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಕೊರೊನಾ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಲಸಿಕೆ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕೇಂದ್ರ, ರಾಜ್ಯ ಸರಕಾರದಿಂದಲೂ ಲಸಿಕೆ ಬರುತ್ತಿದೆ. ಹಂತ ಹಂತವಾಗಿ ಲಸಿಕೆ ಅಭಿಯಾನ ಮತ್ತಷ್ಟು ಪ್ರಗತಿ ಕಾಣುತ್ತದೆ. -ಡಾ| ರಾಜೇಶ್, -ಆರ್‌ಸಿಎಚ್ ಅಧಿಕಾರಿ, ದ.ಕ. ಜಿಲ್ಲೆ
– ನವೀನ್ ಭಟ್ ಇಳಂತಿಲ