Advertisement

ಅಮೆರಿಕಾದ ಕೋವಿಡ್ ನೆರವು ಬುಧವಾರದವರೆಗೆ ವಿಳಂಬ

05:30 PM May 04, 2021 | Team Udayavani |

ವಾಷಿಂಗ್ಟನ್ :  ಕೋವಿಡ್ ಸೋಂಕಿತರ ಚಿಕಿತ್ಸೆಗೆಗಾಗಿ ವೈದ್ಯಕೀಯ ಸಾಮಾಗ್ರಿಗಳೊಂದಿಗೆ ಭಾರತಕ್ಕೆ ತಲುಪಬೇಕಿದ್ದ ಯುಎಸ್ ವಾಯುಪಡೆಯ ವಿಮಾನಗಳು ನಿರ್ವಹಣೆ ಸಮಸ್ಯೆಗಳಿಂದಾಗಿ ಬುಧವಾರದವರೆಗೆ(ಮೇ. 05) ವಿಳಂಬವಾಗಿದೆ ಎಂದು ಪೆಂಟಗನ್ ತಿಳಿಸಿದೆ.

Advertisement

ನಿರ್ವಹಣೆ ಸಮಸ್ಯೆಗಳಿಂದಾಗಿ ಭಾರತಕ್ಕೆ ವಿಮಾನಗಳು ಬುಧವಾರದವರೆಗೆ ವಿಳಂಬವಾಗುತ್ತವೆ ಎಂದು ಯುಎಸ್‌ ಟ್ರಾನ್ಸ್‌ ಕಾಮ್‌ ತಿಳಿಸಿದೆ ಎಂದು ಪೆಂಟಗನ್ ವಕ್ತಾರರು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ ಕೇವಲ ಎರಡು ಯುಎಸ್ ವಾಯುಪಡೆಯ ವಿಮಾನಗಳು ಭಾರತಕ್ಕೆ ಬಂದಿವೆ.

ಓದಿ : ಅಂಕಣಕಾರ ಎಸ್. ಎಫ್ .ಯೋಗಪ್ಪನವರ್ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಮೂರು ಯುಎಸ್ ಏರ್ ಫೋರ್ಸ್ ಸಿ -5 ಸೂಪರ್ ಗ್ಯಾಲಕ್ಸಿಗಳು ಮತ್ತು ಒಂದು ಸಿ -17 ಗ್ಲೋಬ್ ಮಾಸ್ಟರ್ ಸೋಮವಾರ ಭಾರತಕ್ಕೆ ತಲುಪಬೇಕಿತ್ತು. ನಿರ್ವಹಣೆಯ ಸಮಸ್ಯೆಯಿಂದಾಗಿ ನಾಳೆ(ಬುಧವಾರ, ಮೇ.05) ಭಾರತವನ್ನು ತಲುಪಲಿವೆ ಎಂದು ಜಾಗತಿಕ ಸುದ್ದಿ ಸಂಸ್ತೆಗಳು ವರದಿ ಮಾಡಿವೆ.

Advertisement

ಇನ್ನು, ಇದುವರೆಗೆ ಅಮೆರಿಕಾದಿಂದ ಕೇವಲ ಒಂದು ವಿಮಾನ ಮಾತ್ರ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಿದೆ.

ಪೆಂಟಗನ್ ಪ್ರೆಸ್ ನ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದಲ್ಲಿನ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಹಾಯರ್ಥವಾಗಿ ಅಮೇರಿಕ ತನ್ನ ವಿಮಾನಗಳ ಮೂಲಕ ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಣೆಯ ತೊಡಕಿನಿಂದ ಒಂದು ದಿನ ತಡವಾಗಿ ತಲುಪಿಸಲಿದೆ. ಇನ್ನು, ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ನಾವು ಭಾರತದಲ್ಲಿ ನಾವು ಸಹಾಯ ಮಾಡಲು ನಾವು ಏನು ಮಾಡಬೇಕೋ ಅದನ್ನು ಒದಗಿಸಲು ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.

ಓದಿ : ಪ್ರಥಮ ಪಿಯುಸಿ ಪರೀಕ್ಷೆ ರದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next