ಹೊಸದಿಲ್ಲಿ: ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಅಂತ್ಯಕ್ಕೆ ತಲುಪಿದ್ದು, ಇನ್ನೇನು 10-12 ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಬುಧವಾರದ ವರದಿಗಳ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 7,830 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಕಳೆದ 7 ತಿಂಗಳಲ್ಲಿ ದಾಖಲಾದ ಅತೀಹೆಚ್ಚು ಏಕದಿನ ಪ್ರಕ ರಣವಾಗಿದೆ. ಹೊಸ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 40,215ಕ್ಕೆ ಏರಿಕೆಯಾಗಿದೆ.
ಆದಾಗ್ಯೂ ಪ್ರಕರಣಗಳ ಹೆಚ್ಚಳದ ನಡುವೆಯೂ ಆಸ್ಪತ್ರೆಗೆ ದಾಖಲಾಗುವಂಥ ಪರಿಸ್ಥಿತಿ ಕಡಿಮೆಯೇ ಇದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಇಳಿಕೆಯಾಗಲಿದೆ. ಈ ಮೂಲಕ ಪ್ರಕರಣಗಳು ಅಂತ್ಯಕ್ಕೆ ತಲುಪಲಿವೆ ಎನ್ನಲಾಗಿದೆ.
ಇನ್ನು ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಬೂಸ್ಟರ್ ಡೋಸ್‌ಗಳ ಅಗತ್ಯವಿದ್ದು, ಲಸಿಕೆ ತಯಾರಕ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್, ಕೋವಿಶೀಲ್ಡ್ ಲಸಿಕೆಗಳ ಮರು ಉತ್ಪಾದನೆಗೆ ಸಜ್ಜುಗೊಂಡಿದೆ ಎಂದು ಸಂಸ್ಥೆ ಮುಖ್ಯಸ್ಥ ಅಡಾರ್ ಪೂನಾವಾಲಾ ತಿಳಿಸಿದ್ದಾರೆ. ಮತ್ತೂಂದೆಡೆ ಹೊಸದಾಗಿ ಹೆಚ್ಚುವರಿ ಲಸಿಕೆ ಖರೀದಿ ಬಗ್ಗೆ ಕೇಂದ್ರ ಸರಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೇಂದ್ರ ಆರೋಗ್ಯ ಸಚಿವ ರಾದ ಮನ್‌ಸುಖ್ ಮಾಂಡವೀಯ ಶೀಘ್ರವೇ ಈ ಕುರಿತು ಸಭೆ ನಡೆಸಲಿದ್ದು, ಔಷಧಗಳ ಲಭ್ಯತೆ, ದತ್ತಾಂಶ ಗೌಪ್ಯತೆ ಸಹಿತ ಅನೇಕ ಕಾಳಜಿ ವಿಚಾರಗಳ ಕುರಿತು ಇ-ಫಾರ್ಮಸಿ ಪ್ರತಿನಿಧಿಗಳ ಜತೆಗೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.