ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡದಿರು ವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂರಪ್ಪ ನೋಟಿಸ್ ನೀಡಿ ಅಗತ್ಯ ಬಿದ್ದರೆ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್- 19 ನಿಯಂತ್ರಣ ಕ್ರಮ ಕುರಿತಂತೆ ಡಿಸಿಎಂ ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ನಗರದ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿ ಹಾಸಿಗೆ ಕಾಯ್ದಿರಿಸಲು ಒಪ್ಪಿಗೆ ನೀಡಿದ ನಂತರವೂ ಹಾಸಿಗೆಗಳನ್ನು ಬಿಟ್ಟು ಕೊಟ್ಟಿಲ್ಲ ಎಂದರೆ ಏನರ್ಥ? ಕೋವಿಡ್ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ಸಹಕರಿಸದವರ ವಿರುದ್ಧ ಕ್ರಮ ಅನಿವಾರ್ಯ. ಹಾಸಿಗೆ ಬಿಟ್ಟು ಕೊಡದ ಆಸ್ಪತ್ರೆ ಗಳಿಗೆ ತಕ್ಷಣ ನೋಟಿಸ್ ಕೊಟ್ಟು ಎರಡು ದಿನ ಕಾಲಾವ ಕಾಶ ನೀಡಿ. ಕ್ರಮ ಕೈಗೊಳ್ಳಿ ಎಂಬುದಾಗಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೂಚಿಸಿದ್ದು ಪಾಲನೆಯಾಗಬೇಕು: ಕಳೆದ 15- 20 ದಿನಗಳಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇವೆ. ಸೋಮವಾರದ ಸಭೆ ಬಳಿಕ ಏನು ಸೂಚನೆನೀಡುತ್ತೇನೆಯೋ ಅದು ಪಾಲನೆಯಾಗ ಬೇಕು. ದೂರು ಕೇಳಿಬಂದರೂ ಸಹಿಸು ವುದಿಲ್ಲ ಎಂದು ಸಿಎಂ ಎಚ್ಚರಿಸಿದ್ದಾರೆ.
ಬಾಡಿಗೆಗಿಂತ ಸ್ವಂತ ಸೂಕ್ತ? : ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ರೂಪಿಸಿರುವ 10,000 ಹಾಸಿಗೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಂದು ಮಂಚ ಇತರೆ ಸೌಕರ್ಯಕ್ಕೆ ಒಂದು ದಿನಕ್ಕೆ 800 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಅಂದರೆ ನಾಲ್ಕು ತಿಂಗಳಿಗೆ ಮಂಚ ಇತರೆ ಸಲಕರಣೆ ಬಳಕೆಗೆ ಬಾಡಿಗೆ ಸುಮಾರು 1 ಲಕ್ಷ ರೂ.ನಷ್ಟಾಗುತ್ತದೆ! ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಂಚ ಸೇರಿದಂತೆ ಇತರೆ ಸಲಕರಣೆಗೆ ನಾಲ್ಕು ತಿಂಗಳಿಗೆ 1 ಲಕ್ಷ ರೂ. ಬಾಡಿಗೆ ಮೊತ್ತ ನೀಡುವುದು ದುಬಾರಿಯಾಗುತ್ತದೆ. ಬದಲಿಗೆ 25,000 ರೂ. ವೆಚ್ಚ ಮಾಡಿದರೆ ಹೊಸ ಮಂಚವನ್ನೇ ಖರೀದಿಸಬಹುದು ಎಂದರು.