Advertisement

ಆಸೀಸ್ ಫುಟ್ ಬಾಲ್ ತಂಡದ ಗೋಲ್ ಕೀಪರ್ ಗೆ ಕೋವಿಡ್ ಸೋಂಕು ದೃಢ

05:50 PM Jun 09, 2020 | keerthan |

ಸಿಡ್ನಿ: ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೋವಿಡ್-19 ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

Advertisement

ಆಸೀಸ್ ಫುಟ್ ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ ಜೆ ಲೀಗ್ ಪ್ರಥಮ ದರ್ಜೆ ಡಿವಿಷನ್ ಫುಟ್ ಬಾಲ್ ಲೀಗ್ ನಲ್ಲಿ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಇವರಿಗೆ ಕೋವಿಡ್ 19 ಸೋಂಕು ತಾಗಿದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದೆ.

ಈ ಪ್ರಕರಣದೊಂದಿಗೆ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ ಎರಡನೇ ಆಟಗಾರನಿಗೆ ಕೋವಿಡ್- 19 ಸೋಂಕು ತಾಗಿದಂತಾಗಿದೆ. ಕಳೆದ ವಾರವಷ್ಟೇ ಅದೇ ತಂಡದ ಮತ್ತೋರ್ವ ಆಟಗಾರ ಮು ಕನಾಜಕಿಗೆ ವೈರಸ್ ತಗುಲಿತ್ತು.  ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.

ಆದರೆ ಗೋಲ್ ಕೀಪರ್ ಮಿಚೆಲ್ ಗೆ ಯಾವುದೇ ಸೋಂಕು ಲಕ್ಷಣಗಳು ಕಂಡು ಬಂದಿರಲಿಲ್ಲ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next