Advertisement

ಆರೋಪಿಗೆ ಕೋವಿಡ್: ಕ್ಯಾಂಪ್‌ ಠಾಣೆ ಸೀಲ್‌ಡೌನ್‌

03:48 PM Jul 04, 2020 | Suhan S |

ಬೆಳಗಾವಿ: ಪಿಸ್ತೂಲು ತೋರಿಸಿ ಚಿನ್ನಾಭರಣ ದೋಚಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ದರೋಡೆಕೋರನಿಗೆ ಕೋವಿಡ್ ಪಾಸಿಟಿವ್‌ ಇರುವುದು ಖಾತ್ರಿಯಾಗಿದ್ದು, ಹೀಗಾಗಿ ಕ್ಯಾಂಪ್‌ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಿ 11 ಪೊಲೀಸರನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

ಮಜಗಾಂವಿಯ ಸಂತ ಜ್ಞಾನೇಶ್ವರ ನಗರದ 29 ವರ್ಷದ ವ್ಯಕ್ತಿಯನ್ನು ನಾಲ್ಕು ದಿನಗಳ ಹಿಂದೆ ಕ್ಯಾಂಪ್‌ ಪೊಲೀಸರು ಬಂಧಿಸಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಪಿಸ್ತೂಲು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಯನ್ನು ಬಂಧಿಸಿ ಸಂಪರ್ಕಕ್ಕೆ ಬಂದ ಎಲ್ಲ 11 ಸಿಬ್ಬಂದಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಕ್ಯಾಂಟೋನ್ಮೆಂಟ್‌ ಪ್ರದೇಶದಲ್ಲಿರುವ ಕ್ಯಾಂಪ್‌ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಿ ಕಿಮಿನಾಶಕ ಔಷಧಿ ಸಿಂಪಡಣೆ ಮಾಡಲಾಗಿದೆ. ಆರೋಪಿಯನ್ನು ಬಂಧಿಸಿದ ಕೂಡಲೇ ಸುದ್ದಿಗೋಷ್ಠಿ ಕೂಡ ನಡೆಸಲಾಗಿತ್ತು. ಬಂಧಿತನನ್ನು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿದೆ. ಈಗ ಆರೋಪಿಗೆ ಕೋವಿಡ್ ಸೋಂಕು ದೃಢವಾಗುತ್ತಿದ್ದಂತೆ ಹಿಂಡಲಗಾ ಜೈಲಿನಲ್ಲಿಯೂ ಆತಂಕ ಶುರುವಾಗಿದೆ. ಕ್ಯಾಂಪ್‌ ಪೊಲೀಸ್‌ ಠಾಣೆ ಎದುರು ಸುದ್ದಿಗೋಷ್ಠಿ ನಡೆಸಿದಾಗ ಡಿಸಿಪಿ ಯಶೋಧಾ ವಂಟಗೋಡಿ, ಇನ್ಸಪೆಕ್ಟರ್‌ ಡಿ. ಸಂತೋಷಕುಮಾರ ಸೇರಿದಂತೆ ಅನೇಕ ಸಿಬ್ಬಂದಿ ಫೋಟೊ ತೆಗೆಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next