Advertisement
ಲಾಕ್‌ಡೌನ್, ಕಠಿನ ನಿರ್ಬಂಧ ಗಳಿಂದ ಒಂದೊಂದೇ ರಾಜ್ಯಗಳು ಹೊರಬರಲಾರಂಭಿ ಸಿದ್ದು ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಮರಳ ತೊಡಗಿವೆ. ಇದರ ಬೆನ್ನಲ್ಲೇ ಕಳೆದ ಬಾರಿ ಮಾಡಿದ ತಪ್ಪನ್ನು ಮಾಡದಿರುವಂತೆ ಸರಕಾರ ಮತ್ತು ವೈದ್ಯಕೀಯ ತಜ್ಞರು ನಿರಂತರವಾಗಿ ಜನತೆಯಲ್ಲಿ ಮನವಿ ಮಾಡಿ ಕೊಳ್ಳುತ್ತಲೇ ಬಂದಿದ್ದಾರೆ. ದೇಶದಲ್ಲಿ ಮೂರನೇ ಅಲೆ ಮುಂದಿನ ಮೂರ್‍ನಾಲ್ಕು ತಿಂಗಳುಗಳಲ್ಲಿ ಕಾಣಿಸಿಕೊಳ್ಳ ಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
Related Articles
Advertisement
ಮೂರನೇ ಅಲೆಯು ಮಕ್ಕಳನ್ನು ಬಾಧಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದು ಇದನ್ನು ಸರಕಾರ ಮತ್ತು ಜನರು ಗಂಭೀರವಾಗಿ ಪರಿಗಣಿಸಬೇಕಿದೆ. ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗ ಮಕ್ಕಳು ಮತ್ತು ಯುವಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಇವರನ್ನು ಸೋಂಕು ಬಾಧಿ ಸದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಎರಡನೇ ಅಲೆಯ ವೇಳೆ ಈ ಸಮುದಾಯದವರನ್ನೂ ಸೋಂಕು ಬಾಧಿಸಿತ್ತಲ್ಲದೆ ಅಪಾರ ಪ್ರಾಣಹಾನಿಗೆ ಕಾರಣವಾಗಿತ್ತು.
ಕೊರೊನಾ ವೈರಸ್ ಪದೇಪದೆ ರೂಪಾಂತರಗೊಳ್ಳುತ್ತಿರುವುದರಿಂದ ಮೂರನೇ ಅಲೆಯ ವೇಳೆ ಮಕ್ಕಳಿಗೂ ಈ ವೈರಸ್ ಹರಡುವ ಸಾಧ್ಯತೆಗಳಿವೆ ಎಂದು ಇದೀಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತು ಜನರು ಎರಡನೇ ಅಲೆಯ ವೇಳೆ ತಮ್ಮಿಂದಾದ ನಿರ್ಲಕ್ಷ್ಯ, ಲೋಪದೋಷಗಳು ಈ ಬಾರಿ ಆಗದಂತೆ ಎಚ್ಚರ ವಹಿಸಬೇಕಿದೆ. ಕೊರೊನಾ ಮೂರನೇ ಅಲೆ ಎದುರಿಸಲು ಮತ್ತು ಒಂದು ವೇಳೆ ಸೋಂಕು ಮಕ್ಕಳನ್ನು ಬಾಧಿಸಿದರೂ ಅದು ಅಷ್ಟೇನು ಪರಿಣಾಮ ಬೀರದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಮೂರನೇ ಅಲೆ ಎದುರಿಸಲು ಏನು ಸಿದ್ಧತೆಯಾಗಬೇಕಿದೆ ?01. ಶೀಘ್ರ ಲಸಿಕಾಕರಣದ ಅಗತ್ಯ.
02. ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸುವ ಅಗತ್ಯ.
03. ಮೊದಲನೇ ಮತ್ತು 2ನೇ ಅಲೆಯ ವೇಳೆ ದೊಡ್ಡ ಪ್ರಮಾಣದಲ್ಲಿ ವೈರಸ್ ಹರಡಿರುವ ಕ್ಲಸ್ಟರ್‌ಗಳಲ್ಲಿ ವಿಶೇಷ ನಿಗಾ ಮತ್ತು ಅಧ್ಯಯನ ಅಗತ್ಯ.
04. ಆಸ್ಪತ್ರೆಗಳು, ಸಾಕಷ್ಟು ಹಾಸಿಗೆಗಳು, ಮೆಡಿಕಲ್ ಆಕ್ಸಿಜನ್, ವೆಂಟಿಲೇಟರ್‌ಗಳ ವ್ಯವಸ್ಥೆಯನ್ನು ಈಗಿನಿಂದಲೇ ಸಿದ್ಧಪಡಿಸಬೇಕು.
05. ಮಾನವ ಸಂಪನ್ಮೂಲಗಳಾದ – ತರಬೇತಿ ಹೊಂದಿದ ವೈದ್ಯಾಧಿಕಾರಿಗಳು, ಶುಶ್ರೂಷಕ ಸಿಬಂದಿ, ಇತರ ಅರೆ ವೈದ್ಯಕೀಯ ಸಿಬಂದಿಯ ಕ್ರಮಬದ್ಧ ವ್ಯವಸ್ಥೆ.
06. ಮಕ್ಕಳ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸುವ ಅಗತ್ಯ.
07. ದುರ್ಬಲ ಹಾಗೂ ಸೋಂಕು ಸುಲಭವಾಗಿ ತಗಲ ಬಹುದಾದ ಜನ ಸಮುದಾಯವನ್ನು ಗುರುತಿಸಿ, ಅಗತ್ಯ ಮುಂಜಾಗ್ರತೆ ವಹಿಸುವುದು.
08. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರ ಸುರಕ್ಷತೆಗೆ ವಿಶೇಷ ಆದ್ಯತೆ. ಗರ್ಭಿಣಿಯರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
– ಗರ್ಭಿಣಿಯರು ಮಾಸ್ಕ್ ಧರಿಸುವುದನ್ನು ಮರೆ ಯಬಾರದು. ಸಾಧ್ಯವಾದಷ್ಟು ಮನೆಯಲ್ಲೇ ಇರುವುದು. ಆಗಾಗ ಕೈ ತೊಳೆದುಕೊಳ್ಳತಕ್ಕದ್ದು. ಶುಚಿತ್ವಕ್ಕೆ ಆದ್ಯತೆ ಕೊಡತಕ್ಕದ್ದು .
– ಪೌಷ್ಟಿಕಾಂಶ ಸಹಿತ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವಿಸುವುದು.
– ನಿಯಮಿತ ನೀರು, ಪಾನಕ, ಹಣ್ಣುಗಳ ಸೇವನೆ.
– ವೈದ್ಯರ ಸಲಹೆಯ ಮೇರೆಗೆ ನಿತ್ಯ ವಾಕಿಂಗ್, ವ್ಯಾಯಾಮ ಮಾಡುವುದು.
– ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಗಳಿಂದ ದೂರ ಇರುವುದು.
– ಕೊರೊನಾ ಲಕ್ಷಣಗಳಿದ್ದಲ್ಲಿ ನಿರ್ಲಕ್ಷಿಸದೆ ವೈದ್ಯ ರನ್ನು ಸಂಪರ್ಕಿಸುವುದು.
– ಕೊರೊನಾ ಪಾಸಿಟಿವ್ ಬಂದರೆ ಭಯ ಪಡದೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು.
– ಪ್ರಸ್ತುತ ಗರ್ಭಿಣಿಯರಿಗೆ ಲಸಿಕೆ ನೀಡುತ್ತಿಲ್ಲ ವಾದ್ದರಿಂದ ಹೆರಿಗೆಯಾದ ಬಳಿಕ ಲಸಿಕೆಯನ್ನು ಪಡೆದುಕೊಳ್ಳುವುದು.