Advertisement

“3ನೇ ಅಲೆ ಬರುತ್ತಿಲ್ಲ, ಈಗಾಗಲೇ ಬಂದಿದೆ’

11:39 AM Sep 08, 2021 | Team Udayavani |

ಹೊಸದಿಲ್ಲಿ/ಮುಂಬಯಿ: “ಕೊರೊನಾ ಮೂರನೇ ಅಲೆ ಬರುತ್ತಿಲ್ಲ. ಅದು ಈಗಾಗಲೇ ಬಂದಾಗಿದೆ…’ ಹೀಗೆಂದು ಹೇಳಿದ್ದು ಮುಂಬಯಿ ಮೇಯರ್‌ ಕಿಶೋರಿ ಪಡ್ನೇಕರ್‌.

Advertisement

ಗಣೇಶೋತ್ಸವ ಸೇರಿದಂತೆ ಹಲವು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಅಲ್ಲದೇ, ಆಗಸ್ಟ್‌ ತಿಂಗಳಿಡೀ ಮುಬಯಿಯಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಿಗೆ ಹೋಲಿಸಿದರೆ, ಅದರ ಶೇ.28ರಷ್ಟು ಪ್ರಕರಣಗಳು ಸೆಪ್ಟಂಬರ್‌ ತಿಂಗಳ ಮೊದಲ 6 ದಿನಗಳಲ್ಲೇ ಪತ್ತೆಯಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಹೇಳಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.

3ನೇ ಅಲೆ ಮುಂಬಯಿಗೆ ಕಾಲಿಟ್ಟಾಗಿದೆ. ಎಲ್ಲರೂ ಎಚ್ಚರಿಕೆಯಿಂದಿರಬೇಕು. ಯಾವ ಕಾರಣಕ್ಕೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಬಾರದು ಎಂದೂ ಪಡೆ°àಕರ್‌ ಹೇಳಿದ್ದಾರೆ. ಇದೇ ವೇಳೆ, ಜನ ಹೆಚ್ಚು ಸೇರಿದಷ್ಟೂ ಕೊರೊನಾ ವ್ಯಾಪಿಸುವಿಕೆ ಹೆಚ್ಚುತ್ತಿರುವುದಕ್ಕೆ ಹಲವು ರಾಜ್ಯಗಳಲ್ಲಿನ ಬೆಳವಣಿಗೆಗಳೆೇ ಸಾಕ್ಷಿ. ಹಾಗಾಗಿ ಎಲ್ಲರೂ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು  ಗಣೇಶೋತ್ಸವ ಆಚರಿಸಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಮನವಿ ಮಾಡಿದ್ದಾರೆ.

ಸಕ್ರಿಯ ಪ್ರಕರಣ ಇಳಿಕೆ: ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳಲ್ಲಿ 31,222 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 290 ಮಂದಿ ಬಲಿಯಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 4 ಲಕ್ಷಕ್ಕಿಂತ ಕೆಳಗಿಳಿದಿದ್ದು, 3,92,864ಕ್ಕೆ ತಲುಪಿದೆ.

ಕಣ್ಣಿನಲ್ಲಿ ಕೊರೊನಾ: ಏಮ್ಸ್‌ ಅಧ್ಯಯನ: ಕೊರೊನಾಗೆ ಬಲಿಯಾದವರ ಕಣ್ಣುಗಳ ವಿವಿಧ ಭಾಗಗಳಲ್ಲಿ ಕೊರೊನಾ ವೈರಸ್‌ನ ಇರುವಿಕೆ ಕುರಿತು ಅಧ್ಯಯನ ನಡೆಸಲು ಏಮ್ಸ್‌ನ ಆರ್‌ ಪಿ ಸೆಂಟರ್‌ ಮುಂದಾಗಿದೆ. ಇದಕ್ಕಾಗಿ 5 ಕಣ್ಣಿನ ಗುಡ್ಡೆಗಳನ್ನು ಸಂಗ್ರಹಿಸಲಾಗಿದ್ದು, ಕಾರ್ನಿಯಾ, ಆಪ್ಟಿಕ್‌ ನರ್ವ್‌ ಮತ್ತು ರೆಟಿನಾದಲ್ಲಿ ವೈರಸ್‌ ಇರುತ್ತದೆಯೋ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.

Advertisement

ನಿಫಾ: ಮೃತ ಬಾಲಕನ ಸಂಪರ್ಕಿತರಿಗೆ ನೆಗೆಟಿವ್‌ :

ಸಮಾಧಾನದ ಸುದ್ದಿಯೆಂಬಂತೆ, ಕೇರಳದಲ್ಲಿ ನಿಫಾ ವೈರಸ್‌ಗೆ ಬಲಿಯಾದ 12 ವರ್ಷದ ಬಾಲಕನೊಂದಿಗೆ ನೇರ ಸಂಪರ್ಕಕ್ಕೆ ಬಂದವರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಬಾಲಕನ ಹೆತ್ತವರು ಹಾಗೂ ಆರೋಗ್ಯ ಸಿಬಂದಿ ಸೇರಿದಂತೆ 8 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್‌ ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಕೇರಳದಲ್ಲಿ ನಿರ್ಬಂಧ ತೆರವು :

ಕೇರಳದಲ್ಲಿ ಕೊರೊನಾ ಪ್ರಕರಣ ಸ್ವಲ್ಪ ತಗ್ಗಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ, ರವಿವಾರ ಲಾಕ್‌ಡೌನ್‌ ಅನ್ನು ಸರಕಾರ ತೆರವುಗೊಳಿಸಿದೆ. ಪಾಸಿಟಿವಿಟಿ ದರ ಶೇ.15.87ಕ್ಕಿಳಿದಿದ್ದು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತಗ್ಗಿದೆ. ಶೇ.76.15 ರಷ್ಟು ಮಂದಿಗೆ ಸಿಂಗಲ್‌ ಡೋಸ್‌ ಲಸಿಕೆ ಪೂರ್ಣಗೊಂಡಿದೆ. ಹೀಗಾಗಿ ನಿರ್ಬಂಧ ತೆರವು ಮಾಡಿದ್ದೇವೆ ಎಂದು ಸಿಎಂ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ. ಮಂಗಳ ವಾರ ರಾಜ್ಯದಲ್ಲಿ 25,772 ಪ್ರಕರಣ ಪತ್ತೆಯಾಗಿ, 189 ಮಂದಿ ಅಸುನೀಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next