Advertisement

ಕೋವಿಡ್ 3ನೇ ಅಲೆಯ ಆತಂಕ : ಈ ವರ್ಷವೂ ವಿದ್ಯಾಗಮ ಜಾರಿ!

12:10 AM Jul 24, 2021 | Team Udayavani |

ಬೆಂಗಳೂರು : ಕೊರೊನಾ 3ನೇ ಅಲೆಯ ಆತಂಕ ಇರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿಯೂ ವಿದ್ಯಾಗಮವೇ ಪರಿಷ್ಕೃತ ರೂಪದಲ್ಲಿ ಜಾರಿಗೆ ಬರಲಿದೆ.

Advertisement

ಕೊರೊನಾದಿಂದ ವಿದ್ಯಾರ್ಥಿಗಳಿಗೆ ಅಪಾಯ ಆಗದಂತೆ ಇನ್ನಷ್ಟು ಪರಿಷ್ಕೃತ ರೀತಿಯಲ್ಲಿ ವಿದ್ಯಾಗಮ ಅನುಷ್ಠಾನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಪಾಳಿ ಪದ್ಧತಿಯಲ್ಲಿ ಶಾಲೆಗೆ ಕರೆಯಿಸಿ, ಶಾಲಾವರಣದಲ್ಲಿ ಕೊರೊನಾ ನಿಯಮ ಪಾಲಿಸಿ, ತರಗತಿ ನಡೆಸಲಾಗುತ್ತದೆ. ಆರಂಭದಲ್ಲಿ ಪ್ರೌಢಶಾಲೆ, ಹಂತ ಹಂತವಾಗಿ ಹಿರಿಯ ಪ್ರಾಥಮಿಕ, ಕೊನೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಸಲಾಗುತ್ತದೆ.

ಸಂವೇದ ತರಗತಿಗಳನ್ನು ಶಾಲಾವರಣದಲ್ಲೇ ವಿದ್ಯಾರ್ಥಿಗಳು ನೋಡಲು ಬೇಕಾದ ವ್ಯವಸ್ಥೆಯನ್ನು ಮಾಡುವ ಸಾಧ್ಯತೆಯಿದೆ. ಅಲ್ಲದೆ ಕೊರೊನಾ ಪ್ರಕರಣಗಳು ಕಡಿಮೆ ಇರುವಲ್ಲಿ ಪರಿಸ್ಥಿತಿಗೆ ತಕ್ಕಂತೆ ವಿದ್ಯಾಗಮ ಪರಿಷ್ಕರಿಸಿ ಅನುಷ್ಠಾನಗೊಳಿಸುವ ಆಲೋಚನೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next