ಪಣಜಿ: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಕುರಿತು ಲೂಟಿ ಮಾಡಲು ಆರಂಭಿಸಿವೆ. ಆರ್ ಟಿ-ಪಿಸಿಆರ್ ತಪಾಸಣೆಗೆ ರಾಜ್ಯ ಸರ್ಕಾರವು 500 ರು ದರ ನಿಗದಿ ಪಡಿಸಿದೆ. ಆದರೆ ಖಾಸಗಿ ಆಸ್ಪತ್ರೆಗಳು 1,500 ರೂ ಮತ್ತು ಇನ್ನೂ ಇನ್ನೂ ಕೆಲ ಆಸ್ಪತ್ರೆಗಳು 3200 ರೂ ರೂ ಶುಲ್ಕ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಮಡಗಾಂವ್ ನ ಪ್ರಸಿದ್ಧ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರ್‍ಟಿಪಿಸಿಆರ್ ತಪಾಸಣೆಗೆ 1500 ರೂ ಶುಲ್ಕ ಪಡೆಯಲಾಗುತ್ತಿದೆ. ಪೊಂಡಾದ ಖಾಸಗಿ ಲ್ಯಾಬ್‍ನಲ್ಲಿ 1500 ರೂ ಶುಲ್ಕ ವಿಧಿಸಲಾಗುತ್ತಿದೆ. ಮಡಗಾಂವ್ ನ ಖಾಸಗಿ ಪ್ರಯೋಗಾಲಯಗಳಲ್ಲಿಯೂ ಕೂಡ 1500 ರೂ ಶುಲ್ಕ ಪಡೆಯಲಾಗುತ್ತಿದೆ. ಗೋವಾ ಸರ್ಕಾರವು ಆರ್ ಟಿ-ಪಿಸಿಆರ್ ತಪಾಸಣೆಗೆ 500 ರೂ ಮತ್ತು ಎಂಟಿಜನ್ ತಪಾಸಣೆಗೆ 250 ರೂ ನಿಗಧಿಪಡಿಸಿ ಸುತ್ತೋಲೆ ಹೊರಡಿಸಿದೆ. ಆದರೂ ಕೂಡ ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಜನರಿಂದ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.