ಯಳಂದೂರು: ಪಟ್ಟಣದ ತಾಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರ ಕೋವಿಡ್ ಲಸಿಕೆ ವಿತರಣೆಯಲ್ಲಿ ಪ್ರಗತಿ ಕಂಡು ಬಾರದಿರುವುದರಿಂದ ತಾಲೂಕು ಆರೋಗ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿಗಳನ್ನುತರಾಟೆಗೆ ತೆಗೆದುಕೊಂಡರು.
ಈಗ ಎಲ್ಲೆಡೆ ಕೋವಿಡ್ ಲಸಿಕೆಗೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯ ಕರ್ತೆ ದಿನಕ್ಕೆ ಕನಿಷ್ಠ 10 ಜನರನ್ನಾದರೂ ಕರೆದುಕೊಂಡು ಬಂದು ವ್ಯಾಕ್ಸಿನ್ ಹಾಕಿಸಬೇಕು. ಆದರೆ, ಇಲ್ಲಿನ ಪ್ರಗತಿ ಕಡಿಮೆ ಇದೆ. ಈ ಬಗ್ಗೆ ಜಿಲ್ಲಾಮ ಟ್ಟದ ಸಭೆಯಲ್ಲಿ ಸೂಚನೆ ನೀಡಿದ್ದರೂ ನಿರ್ಲಕ್ಷಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 68 ಆಶಾ ಕಾರ್ಯಕರ್ತೆರಯರು ಇದ್ದಾರೆ. ದಿನಕ್ಕೆ ಕನಿಷ್ಠ 600 ಜನಕ್ಕಾದರೂ ಲಸಿಕೆ ನೀಡಬೇಕು. ಈ ದಿನ ಕೇವಲ 13 ಜನರಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಇಲ್ಲಿನ ವೈದ್ಯರು ಹಾಗೂ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ತಾಲೂಕು ಆರೋಗ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿಗಳನ್ನು ನೇರ ಹೊಣೆ ಮಾಡಲಾಗುತ್ತದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಇಲಾಖೆಯ ಸಹಯೋಗವನ್ನು ಪಡೆದುಕೊಂಡು ಲಸಿಕೆ ನೀಡಿಕೆ ಹೆಚ್ಚಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಾಮಗಾರಿ ಪರಿಶೀಲನೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ದುರಸ್ತಿ ಮಾಡುವ ಸಲುವಾಗಿ 70 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಇದನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು. ಕೆಲವು ಕಡೆ ಟೈಲ್ಸ್‌ಗಳು ಮೇಲೆ ಎದ್ದಿವೆ. ಒಪಿಡಿ ಸೇರಿದಂತೆ ಕೆಲವು ಬೋರ್ಡ್‌ಗಳು ಇನ್ನು ಬರೆದಿಲ್ಲ, ಇನ್ನು ಕೆಲವು ಸಣ್ಣಪುಟ್ಟ ಕಾಮಗಾರಿಗಳು ಮಾಡಿಲ್ಲ. ಹಾಗಾಗಿ ಇದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ನಿರ್ಮಿತಿ ಕೇಂದ್ರದ ಜೆಇ ನಂದೀಶ್‌ಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜು ನಾಥ್, ವೈದ್ಯಾಧಿಕಾರಿ ಡಾ. ಶ್ರೀಧರ್‌ಮ ನಿರ್ಮಿತಿ ಕೇಂದ್ರದ ಜೆಇ ನಂದೀಶ್ ಪಪಂ ಆರೋಗ್ಯಾಧಿಕಾರಿ ಮಹೇಶ್‌ಕುಮಾರ್ ಇತರರಿದ್ದರು.