Advertisement
ಕೊರೊನಾ ತಡೆಗೆ ಸರ್ಕಾರ ಕೊರೊನಾ ಕರ್ಫ್ಯೂ ಮುಂದುವ ರಿಸಿರುವುದರಿಂದ ಮಹಾರಾಷ್ಟ್ರ ಸೆರಿದಂತೆ ವಿವಿಧ ನಗರಗಳಿಗೆ ತೆರಳಿದ್ದ ವಲಸಿಗರು ತಾಲೂಕಿಗೆ ಮರಳುತ್ತಿದ್ದು, ಸೋಂಕು ಹರಡುವ ಆತಂಕ ಜನರಲ್ಲಿ ಮೂಡಿದೆ. ಅಲ್ಲದೇ ತಾಲೂಕಿನಲ್ಲಿ ದಿನದಿಂದ ದಿನ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಗಮನಹರಿಸುತ್ತಿಲ್ಲ ಎಂದು ನಾಗರಿಕರ ಆರೋಪವಾಗಿದೆ.
Related Articles
ಕೊರೊನಾ ಮಹಾಮಾರಿ ರೋಗಕ್ಕೆ ಪಟ್ಟಣದಿಂದ ಹಳ್ಳಿಯ ಕಡೆಗೆ ನಿಧಾನವಾಗಿ ತಿರುಗುತ್ತಿದ್ದು. ರೋಗದ ತೀವ್ರತೆಯ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ಆರೋಗ್ಯ ಇಲಾಖೆ ಕೇವಲ ನಾಮಕಾವಸ್ತೆ ಪರೀಕ್ಷೆ ಮಾಡಿ ರೋಗಿಗಳನ್ನು ಹೋಮ್ ಕ್ವಾರಂಟೈನ್ ಮಾಡುತ್ತಿದ್ದಾರೆ. ಜನರು ರೋಗದ ಬಗ್ಗೆ ಭಯ ಪಡದೇ ನಮ್ಮಗೇನು ರೋಗವಿಲ್ಲ ಎಂದು ಅನಗತ್ಯ ಸಂಚರಿಸಲು ಅವಕಾಶ ನೀಡಿದ್ದು ಆರೋಗ್ಯ ಇಲಾಖೆಯ ನಿರ್ಲಕ್ಷ ಎತ್ತಿ ತೋರಿಸುತ್ತದೆ. ಒಬ್ಬರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣವೇ ಸೂಕ್ತ ಚಿಕಿತ್ಸೆ ಮತ್ತು ಜಾಗೃತಿ ವಹಿಸಿದರೇ ಮತ್ತೂಬ್ಬರಿಗೆ ಹರಡುವುದಿಲ್ಲ. ಆದರೇ ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಹಳ್ಳಿ ಹಳ್ಳಿಗಳಲ್ಲಿಗ ಕಾಣಿಸಿಕೊಳ್ಳುತ್ತಿದೆ.
Advertisement
ಈ ರೀತಿ ಮುಂದುವರಿದರೇ ಬೆಂಗಳೂರನಲ್ಲಿ ನಿತ್ಯ ಬರುವ ಪ್ರಕರಣಗಳಿಗಿಂತ ಹೆಚ್ಚು ಪಾಸಿಟಿವ್ ಕೇಸ್‌ಗಳು ಹಳ್ಳಿಗಳಿಂದ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕೊರೊನಾ ಗ್ರಾಮೀಣ ಭಾಗದ ಜನತೆಗೆ ಆವರಿಸುವುದಕ್ಕಿಂತ ಮುಂಚೆ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಪಟ್ಟಣಗಳಿಂದ ಹಳ್ಳಿಗೆ ಬಂದ ಜನರನ್ನು ಸರಿಯಾಗಿ ಪರೀಕ್ಷಿಸಿ ರೋಗ ಲಕ್ಷಣಗಳಿದ್ದರೇ ಪ್ರತ್ಯೇಕವಾಗಿ ಇರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಹಳ್ಳಿಯ ಜನರಿಗೆ ಜಾಗೃತಿ ಮೂಡಿಸುವುದು ಮುಖ್ಯ.
ಮೇ 1ರವರೆಗೆ ತಾಲೂಕಿನಾದ್ಯಂತ 323 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು. ಅದರಲ್ಲಿ 195 ಸಕ್ರಿಯ ಪ್ರಕರಣಗಳಿವೆ. 115 ಜನರು ಗುಣಮುಖವಾಗಿ ಮನೆ ಸೇರಿದರೇ, ಐವರು ತಾಲೂಕು ಆಸ್ಪತ್ರೆ ಹಾಗೂ 11 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದ 55 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮೇ 2ರಂದು ಮತ್ತೇ 48 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.ಡಾ| ಪ್ರಶಾಂತ ತುಂಬಗಿ, ತಾಲೂಕು ವೈದ್ಯಾಧಿಕಾರಿ ಹುನಗುಂದ. *ಮಲ್ಲಿಕಾರ್ಜುನ ಬಂಡರಗಲ್ಲ