Advertisement
ಕೊರೊನಾದ ನಿರ್ವಹಣೆಗೆ ಸರಕಾರ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದು ಕೊಂಡಿದೆ. ಹಾಗಿದ್ದೂ ಕೊರೊನಾ ಗುಣಮುಖ ಹೊಂದಿ ರುವವರಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಪಾರ್ಶ್ವ ಪರಿಣಾಮ, ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದಲ್ಲಿ ಪ್ರತಿಯೋರ್ವನೂ ಸ್ವತಃ ಎಚ್ಚೆತ್ತುಕೊಳ್ಳುವ ಸಾಧ್ಯತೆಗಳು ಜಾಸ್ತಿ. (ಧೂಮಪಾನ, ಮದ್ಯಪಾನದ ಕುರಿತಾಗಿ ಹೇಳುವಂತೆ). ಈಗಾಗಲೇ ಗಮನಿಸಿರುವಂತೆ ಕೊರೊನಾದಿಂದ ಗುಣಮುಖ ಹೊಂದಿ ರು ವವರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಇದರಿಂದ ದೀರ್ಘಾವಧಿಯಲ್ಲಿ ಅಸ್ತಮಾ, ದಮ್ಮು ಮುಂತಾದ ಶ್ಚಾಸಕೋಶ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ. ಜತೆಗೆ ಯಕೃತ್, ಕಿಡ್ನಿ, ರಕ್ತದೊತ್ತಡ, (ಅಪೊರ್ಚುನಿಷ್ಟಿಕ್) ಸೋಂಕಿನ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಮಾನವರ ಸರಾಸರಿ ಜೀವಿತಾವಧಿ ಕಡಿಮೆಯಾಗುವ ಭಯವೂ ಆವರಿಸಿದೆ.
– ಜನಜಂಗುಳಿಗೆ ಅವಕಾಶ ಕೊಡದಿರುವುದು ಉತ್ತಮ. ಮಾಸ್ಕ್ನ ಸರಿಯಾದ ಬಳಕೆ
– ಜನಸಂದಣಿ ಇರುವಲ್ಲಿ ಕಡ್ಡಾಯ ಸಾಮಾಜಿಕ ಅಂತರದ ಪಾಲನೆ.
– ಸ್ಯಾನಿಟೈಸರ್‌ನ ಯೋಗ್ಯ ಬಳಕೆ. ಮನೆಗೆ ಮರಳಿದ ತತ್‌ಕ್ಷಣ ಬಿಸಿನೀರಿನಿಂದ ಚೆನ್ನಾಗಿ ಕೈ, ಬೆರಳುಗಳನ್ನು ತೊಳೆದುಕೊಳ್ಳುವುದು.
– ಹೊರಗಿನಿಂದ ತಂದ ಸಾಮಗ್ರಿಗಳನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಇಡುವುದು.
– ಹವಾಮಾನದ ಉಷ್ಣತೆಯೂ ಜಾಸ್ತಿ ಇರುವ ಕಾರಣ ಸಾಕಷ್ಟು ನೀರಿನ ಸೇವನೆ.
– ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ದಲ್ಲಿ ಬೆಳ್ಳುಳ್ಳಿ, ಶುಂಠಿ, ಮೆಂತ್ಯೆ, ಕರಿಬೇವಿನ ಸೊಪ್ಪು ಮುಂತಾದ ಪದಾರ್ಥಗಳ ಬಳಕೆ.
– ದಿನನಿತ್ಯ ಉಸಿರಾಟದ ವ್ಯಾಯಾಮಗಳು, ಪ್ರಾಣಾಯಾಮ ಮುಂತಾದ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದು.
Related Articles
Advertisement